ADVERTISEMENT

ಒಪ್ಪೊ ಸ್ಮಾರ್ಟ್‌ಫೋನ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಒಪ್ಪೊ ಸಂಸ್ಥೆಯ ಜಾಗತಿಕ ಉಪಾಧ್ಯಕ್ಷ ಸ್ಕೈ ಲಿ ಅವರು ಮೊಬೈಲ್‌ ಬಿಡುಗಡೆ ಮಾಡಿದರು
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಒಪ್ಪೊ ಸಂಸ್ಥೆಯ ಜಾಗತಿಕ ಉಪಾಧ್ಯಕ್ಷ ಸ್ಕೈ ಲಿ ಅವರು ಮೊಬೈಲ್‌ ಬಿಡುಗಡೆ ಮಾಡಿದರು   

ಮುಂಬೈ (ಪಿಟಿಐ): ಭಾರತದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಮೊಬೈಲ್‌ ತಯಾರಿಕಾ ಘಟಕ ಸ್ಥಾಪಿಸಲು ಚೀನಾದ ಮೊಬೈಲ್‌ ತಯಾರಿಕಾ ಸಂಸ್ಥೆ ಒಪ್ಪೊ ನಿರ್ಧರಿಸಿದೆ. ದೆಹಲಿ ಸಮೀಪ ಆಗಸ್ಟ್‌ನಲ್ಲಿ ಈ ತಯಾರಿಕಾ ಘಟಕ ಆರಂಭವಾಗಲಿದೆ ಎಂದು ಸಂಸ್ಥೆಯ ಜಾಗತಿಕ ಉಪಾಧ್ಯಕ್ಷ ಸ್ಕೈ ಲಿ ಅವರು ಹೇಳಿದ್ದಾರೆ.

ಛಾಯಾಚಿತ್ರಗಳನ್ನು ತೆಗೆಯುವು ದಕ್ಕೆ  ಹೆಚ್ಚು ಒತ್ತು ನೀಡುವ  ಒಪ್ಪೊ ಕ್ಯಾಮರಾ ಫೋನ್ ‘ಎಫ್ 1’ ಸರಣಿಯ ಮೊಬೈಲ್‌ಗಳನ್ನು   ದೇಶಿ ಮಾರುಕಟ್ಟೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ‘ಸೆಲ್ಫಿ ಎಕ್ಸ್‌ ಪರ್ಟ್’ ಎಂಬ ಅಡಿಬರಹ ಹೊಂದಿರುವ ಈ ಫೋನ್‌ಗಳು ಛಾಯಾಚಿತ್ರಗಳನ್ನು ತೆಗೆಯುವು ದಕ್ಕೆ ಸಂಬಂಧಿಸಿದಂತೆ ಗ್ರಾಹಕರ ನಿರೀಕ್ಷೆ ಗಳನ್ನೆಲ್ಲ ಈಡೇರಿಸಲಿವೆ ಎಂದಿದ್ದಾರೆ.

ಎಫ್‌1 ₹ 15,990 ಮತ್ತು ಎಫ್ 1 ಪ್ಲಸ್ ಮೊಬೈಲ್‌ ಬೆಲೆ ₹26,990 ಇದೆ.  ಬೆಂಗಳೂರಿನಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ಇವು ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.