ADVERTISEMENT

ಕಾರ್ಪೊರೇಷನ್ ಬ್ಯಾಂಕ್ ಕಾಮನ್‌ವೆಲ್ತ್ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:00 IST
Last Updated 26 ಫೆಬ್ರುವರಿ 2011, 17:00 IST

ಬೆಂಗಳೂರು: ಲಂಡನ್‌ನಲ್ಲಿರುವ ಕಾಮನ್‌ವೆಲ್ತ್ ಸಚಿವಾಲಯದ ಸಹಭಾಗಿತ್ವದಲ್ಲಿ ಕಾರ್ಪೊರೇಷನ್ ಬ್ಯಾಂಕ್ ಜಾರಿಗೊಳಿಸಿಗೊಳಿಸುತ್ತಿರುವ ‘ಯುವ ಉದ್ಯಮಿಗಳಿಗೆ ಹಣಕಾಸಿನ ನೆರವು’ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮಂಗಳೂರಿನಲ್ಲಿ ಅಂತಿಮ ಅನುಮೋದನೆ ನೀಡಲಾಯಿತು.

ಭಾರತವೂ ಸೇರಿದಂತೆ 53 ಕಾಮನ್‌ವೆಲ್ತ್ ದೇಶಗಳಲ್ಲಿ ಮಹಿಳಾ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಯುವ ಉದ್ಯಮಿಗಳಿಗೆ ಹಣಕಾಸಿನ ನೆರವು, ತರಬೇತಿ, ಮಾರ್ಗದರ್ಶನ, ಮಾರುಕಟ್ಟೆ ಮಾಹಿತಿ ನೀಡಲಾಗುವುದು. 18 ರಿಂದ 28 ವರ್ಷದೊಳಗಿನ ಉತ್ಸಾಹಿ ಮಹಿಳೆಯರು ಈ ಕಾರ್ಯಕ್ರಮದ ಫಲಾನುಭವಿಗಳು ಎಂದು ಕಾರ್ಪೊರೇಷನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಮನಾಥ್ ಪ್ರದೀಪ್ ತಿಳಿಸಿದ್ದಾರೆ.

ಕಾರ್ಯಕ್ರಮ ಅನುಷ್ಠಾನಕ್ಕಾಗಿ ಈಗಾಗಲೆ ವಿವಿಧ ರಾಜ್ಯಗಳ ಆರು ಜಿಲ್ಲೆಗಳನ್ನು ಗುರುತಿಸಲಾಗಿದ್ದು, ರಾಜ್ಯದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾದರಿ ಯೋಜನೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.