ಬೆಂಗಳೂರು: ಜಿಎಸ್ಟಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿದಾರರಿಗೆ ನೆರವಾಗಲು ಕೆನರಾ ಬ್ಯಾಂಕ್ ಕ್ರಮ ಅಗತ್ಯ ಕೈಗೊಂಡಿದೆ. ಪ್ರತ್ಯೇಕ ಸಹಾಯ ಕೇಂದ್ರವನ್ನೂ (gsthelpdesk@canarabank.com) ಆರಂಭಿಸಿದೆ.
ಜಿಎಸ್ಟಿಗೆ ನೆರವಾಗಲು ಸಿಬಿಎಸ್ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಮಾಡಿದೆ. ತೆರಿಗೆದಾರರಿಂದ ಜಿಎಸ್ಟಿ ಸಂಗ್ರಹಿಸಲು ಶಾಖೆಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಜಿಎಸ್ಟಿ ಪಾವತಿಸಬಹುದು ಎಂದು ಬ್ಯಾಂಕ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.