ತಿರುವನಂತಪುರ (ಪಿಟಿಐ): ಭಾರತೀಯ ಮಹಿಳಾ ಬ್ಯಾಂಕಿನ (ಬಿಎಂಬಿ) 13ನೇ ಶಾಖೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಮಾ. 10ರಂದು ಉದ್ಘಾಟನೆಯಾಗಲಿದೆ. ಕೇರಳದಲ್ಲಿ ಇದು ಬ್ಯಾಂಕಿನ ಮೊದಲ ಶಾಖೆ.
ಎಲ್ಲ ರಾಜ್ಯಗಳ ರಾಜಧಾನಿಯಲ್ಲೂ ‘ಬಿಎಂಬಿ’ಶಾಖೆ ತೆರೆಯಲಾಗುವುದು. 2014ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ಶಾಖೆಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಬಿಎಂಬಿ’ನ ‘ಡಿಜಿಎಂ’ ಮಾಯಾ ಎಂ.ಸಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.