ADVERTISEMENT

ಕೇರಳ: ವಿದ್ಯುತ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ತಿರುವನಂತಪುರ (ಪಿಟಿಐ): ಕೇರಳದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಮಳೆ ಕೊರತೆಯಿಂದ ನದಿಗಳಲ್ಲಿ ನೀರು ಬತ್ತಿದ್ದು, ಜಲ ವಿದ್ಯುತ್ ಯೋಜನೆ ಸ್ಥಗಿತ ಭೀತಿಯಲ್ಲಿವೆ.

ರಾಜ್ಯ ವಿದ್ಯುತ್ ಸರಬರಾಜು ಮಂಡಳಿ ಮಾಹಿತಿ ಪ್ರಕಾರ 9400 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಗೆ ಸಾಲುವಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ನಿತ್ಯದ ವಿದ್ಯುತ್ ಬೇಡಿಕೆ 600 ಲಕ್ಷ ಯುನಿಟ್. ವಿದ್ಯುತ್ ಅಭಾವ ನೀಗಿಸಲು ಸರ್ಕಾರ ಪ್ರತಿ ದಿನ ಸಂಜೆ ಅರ್ಧ ಗಂಟೆಯಂತೆ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದೆ.

ಬೇಡಿಕೆ ಪೂರೈಸಲು ಸಾಧ್ಯವಾಗದೆ ವರಮಾನ ಕುಸಿದು ವಿದ್ಯುತ್ ಸರಬರಾಜು ಮಂಡಳಿ ನಷ್ಟ ಭೀತಿಯಲ್ಲಿದೆ. ಸದ್ಯ ನಿತ್ಯ 110 ಲಕ್ಷ ಯುನಿಟ್‌ವಿದ್ಯುತ್ ಉತ್ಪಾದನೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.