ADVERTISEMENT

ಕೋಲ್ಕತ್ತ ಮೆಟ್ರೊಗೆ ಬೋಗಿ ಹಸ್ತಾಂತರಿಸಿದ ಬಿಇಎಂಎಲ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST

ಬೆಂಗಳೂರು: ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಡೆಡ್‌ (ಬಿಇಎಂಎಲ್‌) ಸಂಸ್ಥೆಯು ಕೋಲ್ಕತ್ತ ಮೆಟ್ರೊ ರೈಲ್‌ ಕಾರ್ಪೊರೇಷನ್‌ಗೆ (ಕೆಎಂಆರ್‌ಸಿಎಲ್‌) ಆರು ಬೋಗಿಗಳನ್ನು ನೀಡಿದೆ.

ಬೆಂಗಳೂರಿನಲ್ಲಿ ಇರುವ ಬಿಇಎಂಎಲ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಡಿ.ಕೆ. ಹೋಟಾ ಅವರು ಕೆಎಂಆರ್‌ಸಿಎಲ್‌ನ ನಿರ್ದೇಶಕ ಎ.ಕೆ. ಕುಂದು ಅವರಿಗೆ ಬೋಗಿಗಳನ್ನು ಹಸ್ತಾಂತರಿಸಿದರು. ‘ನಗರ ಮೆಟ್ರೊ ಸಾರಿಗೆಗೆ ವಿಶ್ವ ದರ್ಜೆಯ ಮೆಟ್ರೊ ಬೋಗಿಗಳನ್ನು ಬಿಇಎಂಎಲ್‌ ಪೂರೈಸುತ್ತಿದೆ. ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆ ಆಗುವುದಲ್ಲದೆ  ‘ಭಾರತದಲ್ಲಿಯೇ ತಯಾರಿಸಿ’ ನೀತಿಗೆ ಉತ್ತೇಜನ ಸಿಗುತ್ತಿದೆ. ಕೋಲ್ಕತ್ತ ಮೆಟ್ರೊ ಪ್ರಯಾಣಿಕರಿಗೆ ಸೇವೆಯನ್ನು ನೀಡುವಲ್ಲಿ ಕೆಎಂಆರ್‌ಸಿಎಲ್‌ ಜತೆ ಸಹಯೋಗ ಹೊಂದುತ್ತಿರುವುದು ಸಂತೋಷದ ಸಂಗತಿ’ ಎಂದು ಹೋಟಾ ತಿಳಿಸಿದ್ದಾರೆ.

ಒಟ್ಟು 80 ಬೋಗಿಗಳನ್ನು ನೀಡಲು ₹ 900 ಕೋಟಿ ಮೌಲ್ಯದ ಒಪ್ಪಂದವನ್ನು ಬಿಇಎಂಎಲ್‌  ಮಾಡಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.