ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗಾಗಿ ಮೊಬೈಲ್ ಸೇವಾ ಸಂಸ್ಥೆ ಯುನಿನಾರ್ ‘ಕ್ರಿಕೆಟ್ ಅನ್ಲಿಮಿಟೆಡ್’ ಹೆಸರಿನ ವಿನೂತನ ಸೇವೆ ಆರಂಭಿಸಿದೆ. ಕ್ರಿಕೆಟ್ ಆಟದ ಒಂದು ಕ್ಷಣವನ್ನೂ ತಪ್ಪಿಸಿಕೊಳ್ಳಲು ಮಾಡಿಕೊಳ್ಳಲು ಇಷ್ಟಪಡದ ಅಭಿಮಾನಿಗಳಿಗೆಂದೇ ಈ ಸೌಲಭ್ಯವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
‘ಕ್ರಿಕೆಟ್ ಅನ್ಲಿಮಿಟೆಡ್’ ಸೇವೆಗೆ ಚಂದಾದಾರರಾಗಲು, ಯುನಿನಾರ್ ಗ್ರಾಹಕರು, ದರರಹಿತ ಸಂಖ್ಯೆ 52255 ಕ್ಕೆ ಕರೆ ಮಾಡಿ ಸೇವೆಗಾಗಿ ವಿನಂತಿಸಿಕೊಳ್ಳಬೇಕು. ಈ ಸೇವೆಯು ಪಂದ್ಯಕ್ಕೆ ಕೇವಲ ರೂ 3 ದರದಲ್ಲಿ ಲಭ್ಯವಿದೆ. ತಿಂಗಳಿಗೆ ಕೇವಲ ರೂ 30 ಪಾವತಿಸಿಯೂ ಈ ಸೇವೆ ಪಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.