ADVERTISEMENT

ಕ್ಲೌಡ್ ಕಂಪ್ಯೂಟಿಂಗ್ ಐಡಿಸಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಬೆಂಗಳೂರು: ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಮತ್ತು ಸಾಯಿ ಇನ್ಫೋಸಿಸ್ಟಂ ಇಂಡಿಯಾ ಲಿಮಿಟೆಡ್ (ಎಸ್‌ಐಎಸ್), ಪಾಲುದಾರಿಕೆಯಡಿ ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸಲಿವೆ.

ಸಾಫ್ಟ್‌ವೇರ್ ಬಾಡಿಗೆ ನೀಡುವ ಕ್ಲೌಡ್ ಕಂಪ್ಯೂಟಿಂಗ್‌ನ  ಪಾಲುದಾರಿಕೆಯ ಐಡಿಸಿ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.           ಸಾಫ್ಟ್‌ವೇರ್ ಅಪ್ಲಿಕೇಷನ್ ಸೇವೆ, ದತ್ತಾಂಶ  ಪಡೆಯುವುದು, ಅವುಗಳ ನಿರ್ವಹಣೆ, ಮಾಹಿತಿ ಸಂಗ್ರಹ ಮತ್ತು ಸಂವಹನ ಸೇವೆಗಳನ್ನು ಒಳಗೊಂಡಿರುತ್ತದೆ.

ಬಿಎಸ್‌ಎನ್‌ಎಲ್ ಮತ್ತು ಎಸ್‌ಐಎಸ್ ದತ್ತಾಂಶ ಕೇಂದ್ರವು ಜಾಗತಿಕ ಗುಣಮಟ್ಟದ ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸಲಿದೆ. ಸಂಪನ್ಮೂಲ, ಸಾಫ್ಟ್‌ವೇರ್ ಮತ್ತು ಮಾಹಿತಿಯನ್ನು ಇಂಟರ್‌ನೆಟ್ ಮೂಲಕ ಒದಗಿಸಲಾಗುವುದು.
ಬಿಎಸ್‌ಎನ್‌ಎಲ್ ವಹಿವಾಟು ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್. ಎಸ್. ರಾವ್ ಮತ್ತು `ಎಸ್‌ಐಎಸ್~ ಸಿಇಒ ನವೀನ್ ಭಾಸಿನ್, ಐಡಿಸಿ ಕೇಂದ್ರದ ಉದ್ಘಾಟನೆ ನೆರವೇರಿಸಿದರು.

ಕ್ಲೌಡ್ ಕಂಪ್ಯೂಟಿಂಗ್ ಲಕ್ಷಾಂತರ ಉದ್ಯೋಗ ಸೃಷ್ಟಿಸಲಿದ್ದು, ಐ.ಟಿ ಬಳಕೆದಾರರೂ ಇದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.