ADVERTISEMENT

ಖಾದ್ಯತೈಲ ಉತ್ಪಾದನೆ ಸ್ವಾವಲಂಬನೆಗೆ ಕ್ರಮ

ಸಂಸ್ಕರಣೆ, ಪ್ಯಾಕೇಜಿಂಗ್‌ಗೆ ಸಣ್ಣ ಘಟಕಗಳ ಸ್ಥಾಪನೆ ಅಗತ್ಯ

ಪಿಟಿಐ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ಗಜೇಂದ್ರ ಸಿಂಗ್‌ ಶೇಖಾವತ್‌
ಗಜೇಂದ್ರ ಸಿಂಗ್‌ ಶೇಖಾವತ್‌   

ಹೈದರಾಬಾದ್‌: 2022ರ ಒಳಗೆ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ತಿಳಿಸಿದ್ದಾರೆ.

‘ಖಾದ್ಯತೈಲ ಉತ್ಪಾದನೆಯ ಮಾರ್ಗಸೂಚಿ’ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ ₹ 70 ಸಾವಿರ ಕೋಟಿಗಳಷ್ಟು ಮೌಲ್ಯದ ಖಾದ್ಯತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ದೇಶದಲ್ಲಿಯೇ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸುವ ಪ್ರಯತ್ನ ಜಾರಿಯಲ್ಲಿದೆ’ ಎಂದು ಹೇಳಿದ್ದಾರೆ.

ದೇಶಿ ಬೇಡಿಕೆ 1.5 ಕೋಟಿ ಟನ್‌ಗಳಷ್ಟಿದೆ. ಆದರೆ ಉತ್ಪಾದನೆ ಆಗುತ್ತಿರುವುದು 85 ಲಕ್ಷ ಟನ್‌ ಮಾತ್ರ.

ADVERTISEMENT

‘ದೇಶದಲ್ಲಿ ಖಾದ್ಯ ತೈಲ ಉತ್ಪಾದನೆ ಹೆಚ್ಚಾಗಲು ತೈಲ ಸಂಸ್ಕರಣೆ, ಪ್ಯಾಕೇಜಿಂಗ್‌ ಮತ್ತು ಬ್ರ್ಯಾಂಡಿಂಗ್‌ ಕೆಲಸಗಳನ್ನು ಮಾಡಲು ಗ್ರಾಮೀಣ ಭಾಗದಲ್ಲಿ ಸಣ್ಣ ಘಟಕಗಳ ಸ್ಥಾಪನೆ ಅಗತ್ಯ. ಹೀಗೆ ಮಾಡುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುವುದರ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯೂ ಸಾಧ್ಯವಾಗು
ತ್ತದೆ’ ಎಂದು ಶೇಖಾವತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.