ADVERTISEMENT

ಚಂದ್ರಶೇಖರನ್‌ ವೇತನ ₹ 21 ಕೋಟಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 19:30 IST
Last Updated 8 ಜೂನ್ 2015, 19:30 IST
ಚಂದ್ರಶೇಖರನ್‌ ವೇತನ ₹ 21 ಕೋಟಿ
ಚಂದ್ರಶೇಖರನ್‌ ವೇತನ ₹ 21 ಕೋಟಿ   

ನವದೆಹಲಿ (ಪಿಟಿಐ): ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್‌. ಚಂದ್ರಶೇಖರನ್‌ ಅವರ ಸಂಭಾವನೆ 2014–15ರಲ್ಲಿ ₹21.28 ಕೋಟಿಗೆ ತಲುಪಿದೆ. 

ಈ ಮೂಲಕ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳನ್ನು ನೀಡುವ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಿಇಒ ಎನಿಸಿಕೊಂಡಿದ್ದಾರೆ.
2013–14ನೇ ಹಣಕಾಸು ವರ್ಷದಲ್ಲಿ ಚಂದ್ರಶೇಖರನ್‌ ಅವರು ₹18.68 ಕೋಟಿ ಸಂಭಾವನೆ ಪಡೆದಿದ್ದರು. ಇದಕ್ಕೆ ಹೋಲಿಸಿದರೆ 2014–15ರಲ್ಲಿ ಅವರ ಸಂಭಾವನೆ ಯಲ್ಲಿ ಶೇ 14ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.