ನವದೆಹಲಿ (ಪಿಟಿಐ): ಗ್ರಾಹಕ ದರ ಸೂಚಿ (ಸಿಪಿಐ) ಆಧರಿಸಿದ ದೇಶದಲ್ಲಿನ ಚಿಲ್ಲರೆ ಹಣದುಬ್ಬರ ಪ್ರಮಾಣ ಮಾರ್ಚ್ ತಿಂಗಳಲ್ಲಿ ಶೇ. 9.47ಕ್ಕೆ ಏರಿದೆ.
ಸರ್ಕಾರ ಬುಧವಾರ ಅಂಕಿ- ಅಂಶ ಬಿಡುಗಡೆ ಮಾಡಿದ್ದು, ಹಾಲು, ತರಕಾರಿ, ಖಾದ್ಯ ತೈಲ, ಪ್ರೊಟೀನ್ ಆಧಾರಿತ ಆಹಾರ ಪದಾರ್ಥಗಳ ಬೆಲೆ ಏರಿಕೆ ಪರಿಣಾಮ ಹಣದುಬ್ಬರದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ `ಸಿಪಿಐ~ ಶೇ 8.83ರಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.