ADVERTISEMENT

ಚೆನ್ನೈ ಪೋರ್ಟ್‌ ಟ್ರಸ್ಟ್‌ಗೆ ಲಾಭ

ಪಿಟಿಐ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST

ಚೆನ್ನೈ: ಚೆನ್ನೈ ಪೋರ್ಟ್‌ ಟ್ರಸ್ಟ್‌ 2017–18ನೇ ಹಣಕಾಸು ವರ್ಷದಲ್ಲಿ ₹32 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ₹ 13 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ₹19 ಕೋಟಿಯಷ್ಟು ಹೆಚ್ಚು ಲಾಭ ಗಳಿಸಿದೆ. ಕಾರ್ಯಾಚರಣಾ ಲಾಭ ₹217 ಕೋಟಿಯಿಂದ ₹225 ಕೋಟಿಗೆ ಏರಿಕೆಯಾಗಿದೆ.

ಈ ಅವಧಿಯಲ್ಲಿ ಸರಕು ಸಾಗಣೆ ಪ್ರಮಾಣ 5 ಕೋಟಿ ಟನ್‌ಗಳಿಂದ 5.1 ಕೋಟಿ ಟನ್‌ಗಳಿಗೆ ಅಲ್ಪ ಏರಿಕೆ ಕಂಡಿದೆ.

ADVERTISEMENT

‘ಜಾಗತಿಕ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಸರಕು ಸಾಗಣೆ ಪ್ರಮಾಣದಲ್ಲಿನ ಹೆಚ್ಚಳವು ಹೆಮ್ಮೆ ತರುವ ವಿಷಯವಾಗಿದೆ’ ಎಂದು ಚೆನ್ನೈ ಪೋರ್ಟ್‌ ಟ್ರಸ್ಟ್‌ನ ಅಧ್ಯಕ್ಷ ಪಿ. ರವೀಂದ್ರನ್‌ ಹೇಳಿದ್ದಾರೆ.

ಕಂಟೇನರ್‌ ಪ್ರಮಾಣ 3 ಕೋಟಿ ಟನ್‌, ಪೆಟ್ರೋಲಿಯಂ ಉತ್ಪನ್ನಗಳ ಪ್ರಮಾಣ 1.35 ಕೋಟಿ ಟನ್‌ಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.