ADVERTISEMENT

ಜಿಎಸ್‌ಟಿ ಸಂಗ್ರಹ ಇಳಿಕೆ

ಪಿಟಿಐ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಜಿಎಸ್‌ಟಿ ಸಂಗ್ರಹ ಇಳಿಕೆ
ಜಿಎಸ್‌ಟಿ ಸಂಗ್ರಹ ಇಳಿಕೆ   

ನವದೆಹಲಿ: ಫೆಬ್ರುವರಿ ತಿಂಗಳಿನಲ್ಲಿ ರಿಟರ್ನ್ಸ್‌ ಸಲ್ಲಿಕೆ ಕಡಿಮೆ ಆಗಿರುವುದರಿಂದ ಜಿಎಸ್‌ಟಿ ಸಂಗ್ರಹದಲ್ಲಿ ಮತ್ತೆ ಇಳಿಕೆ ಕಾಣುವಂತಾಗಿದೆ.

ಜನವರಿಯಲ್ಲಿ ₹ 86,318 ಕೋಟಿ ಇತ್ತು. ಅದು ಫೆಬ್ರುವರಿಯಲ್ಲಿ ₹ 85,174 ಕೋಟಿಗೆ ಇಳಿಕೆ ಕಂಡಿದೆ.

ಮಾರ್ಚ್‌ 25ರವರೆಗೆ, ಫೆಬ್ರುವರಿ ತಿಂಗಳ 59.51 ಲಕ್ಷ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯಾಗಿದೆ. ಒಟ್ಟು ತೆರಿಗೆಪಾವತಿದಾರರ ಸಂಖ್ಯೆಗೆ ಹೋಲಿಸಿದರೆ ಶೇ 69 ರಷ್ಟು ಮಾತ್ರ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.