ADVERTISEMENT

ಜಿಮ್-2:10 ಲಕ್ಷ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST
ಜಿಮ್-2:10 ಲಕ್ಷ ಉದ್ಯೋಗ
ಜಿಮ್-2:10 ಲಕ್ಷ ಉದ್ಯೋಗ   

ಬೆಂಗಳೂರು:  ಜೂನ್ 7, 8ರಂದು ನಡೆಯಲಿರುವ ಎರಡನೇಯ ಸುತ್ತಿನ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಮ್-2) ಮೂಲಕ ಕನಿಷ್ಠ ರೂ 6 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮತ್ತು 10 ಲಕ್ಷ ಕೋಟಿ ಉದ್ಯೋಗಾವಕಾಶ ಸೃಷ್ಟಿ ಅಂದಾಜಿಸಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಜಿಮ್-1~ರಲ್ಲಿ ಮಾಡಿಕೊಂಡ 389 ಒಡಂಬಡಿಕೆಗಳಲ್ಲಿ (ಎಂಒಯು) 40 ಒಡಂಬಡಿಕೆಗಳು ಈಗಾಗಲೇ ಜಾರಿಯಾಗಿವೆ. ಹಲವು `ಎಂಒಯು~ಗಳು ಜಾರಿಗೊಳ್ಳುವ ವಿವಿಧ ಹಂತಗಳಲ್ಲಿವೆ. ಒಟ್ಟಾರೆ ಶೇ 62ರಷ್ಟು ಅನುಷ್ಠಾನಗೊಂಡಿವೆ ಎಂದರು.

ಕೃಷಿ ಆಧಾರಿತ ಉದ್ಯಮಗಳು, ಪ್ರವಾಸೋದ್ಯಮ, ಜವಳಿ ಸೇರಿದಂತೆ ಈ ಬಾರಿ ಪ್ರಮುಖವಾಗಿ 14 ವಲಯಗಳಲ್ಲಿ ಗರಿಷ್ಠ ಹೂಡಿಕೆ ನಿರೀಕ್ಷಿಸಲಾಗಿದೆ.  ಪ್ರತಿ ಜಿಲ್ಲೆಗೆ ಒಂದರಂತೆ ಬೃಹತ್ ಕೈಗಾರಿಕೆ ಘಟಕಗಳು ಸ್ಥಾಪನೆಯಾಗುವಂತೆ ಯೋಜನೆ ರೂಪಿಸಲಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ಎರಡು ಮತ್ತು ಮೂರನೇಯ ಹಂತದ ನಗರಗಳಲ್ಲಿ ರೂ 250 ಕೋಟಿಗಿಂತಲೂ ಹೆಚ್ಚಿನ ಹೂಡಿಕೆ ಮಾಡುವ ಸಂಸ್ಥೆಗಳಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಲಾಗಿದೆ ಎಂದರು.

ಒಟ್ಟು 30 ದೇಶಗಳು `ಜಿಮ್-2~ನಲ್ಲಿ ಪಾಲ್ಗೊಳ್ಳಲಿದ್ದು, ಜಪಾನ್, ಜರ್ಮನಿ ಮತ್ತು ಮೆಕ್ಸಿಕೊ  ಪಾಲುದಾರ ದೇಶಗಳಾಗಿ ಭಾಗವಹಿಸುತ್ತಿವೆ. ಈಗಾಗಲೇ 300ಕ್ಕೂ ಹೆಚ್ಚು ಹೂಡಿಕೆ ಪ್ರಸ್ತಾವಗಳು ಬಂದಿವೆ ಎಂದರು.

ಹೂಡಿಕೆಗೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಗಮನ ಹರಿಸುತ್ತಿದೆ. ಬೆಂಗಳೂರು-ಮೈಸೂರು, ಹುಬ್ಬಳ್ಳಿ -ಬೆಳಗಾವಿ ನಡುವೆ ಹೈಸ್ಪೀಡ್ ರೈಲು ಸಂಪರ್ಕ ಪರಿಶೀಲನೆಯಲ್ಲಿದೆ. ಶಿರಾಡಿ ಘಾಟ್‌ನಲ್ಲಿ `ಟನಲ್ ರೋಡ್~ ನಿರ್ಮಿಸುವ ಪ್ರಸ್ತಾವವೂ ಇದೆ. ಈ ಎರಡು ಯೋಜನೆಗಳನ್ನು ಜಪಾನಿನ ಕಂಪೆನಿಗಳು ನಿರ್ವಹಿಸಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.