ಬೆಂಗಳೂರು: ಭಾರತ ಟೀ ಮಂಡಳಿಯ ನೂತನ ಉಪಾಧ್ಯಕ್ಷರಾಗಿ ಕರ್ನಾಟಕದ ಸಿ.ಎನ್.ನಟರಾಜ್ ಆಯ್ಕೆಯಾಗಿದ್ದಾರೆ.
ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆದ ಟೀ ಮಂಡಳಿ ಸಭೆಯಲ್ಲಿ ನಟರಾಜ್ ಅವರನ್ನು 2011-12ನೇ ಸಾಲಿನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು .
ಸದ್ಯ ದಕ್ಷಿಣ ಭಾರತ ಪ್ಲಾಂಟೇಷನ್ ಬೆಳೆಗಾರರ ಸಂಯುಕ್ತ ಒಕ್ಕೂಟದ (ಉಪಾಸಿ) ಅಧ್ಯಕ್ಷರಾಗಿರುವ ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ನಟರಾಜ್, ಸಂಬಾರ ಮಂಡಳಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.