ADVERTISEMENT

ಟೊಯೊಟಾ ಕಾರು ದುಬಾರಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST

ನವದೆಹಲಿ(ಪಿಟಿಐ): ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್(ಟಿಕೆಎಂ) ಸೆಪ್ಟೆಂಬರ್ 1ರಿಂದ ತನ್ನ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಅಂದಾಜು ಶೇ 1.5ರಷ್ಟು ಹೆಚ್ಚಿಸಲಿದೆ. ಈ ಮೊದಲು ಜೂನ್ ತಿಂಗಳಲ್ಲಿಯೂ ಕಾರುಗಳ ಬೆಲೆಯನ್ನು ಶೇ 1ರಷ್ಟು ಹೆಚ್ಚಿಸಲಾಗಿತ್ತು.

ರೂಪಾಯಿ ಅಪಮೌಲ್ಯದ ಪರಿಣಾಮ ತೀವ್ರವಾಗಿದೆ. ಅದರಿಂದಾಗಿ ಕಾರು ಮಾರಾಟ ಲಾಭ ಪ್ರಮಾಣ ಬಹಳ ಕಡಿಮೆ ಆಗಿದೆ. ಹಾಗಾಗಿ ಕಾರುಗಳ ಬೆಲೆ ಏರಿಕೆ ಅನಿವಾರ್ಯ. ಈ ಏರಿಕೆ ಶೇ 1.5ರ ಆಸುಪಾಸಿನಲ್ಲಿರಲಿದೆ ಎಂದು `ಟಿಕೆಎಂ~ನ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಸದ್ಯ ಟೊಯೊಟಾ ಲಿವಾ ಕಾರು ರೂ. 4.10 ಲಕ್ಷದಿಂದ 6.32 ಲಕ್ಷದವರೆಗೂ, ಎಟಿಯೋಸ್ ಸೆಡಾನ್ ಮಾದರಿ ರೂ. 5.14 ಲಕ್ಷದಿಂದ 8.23 ಲಕ್ಷದವರೆಗೂ ಇವೆ. ಇನ್ನೋವಾ ಬೆಲೆ ರೂ. 8.98 ಲಕ್ಷದಿಂದ 13.72 ಲಕ್ಷ ಇದ್ದರೆ, ಪ್ರೀಮಿಯಂ ಸೆಡಾನ್ ಕೊರೊಲ್ಲಾ ಆಲ್ಟಿಸ್‌ಗೆ ರೂ. 11 ಲಕ್ಷದಿಂದ 15.43 ಲಕ್ಷ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.