ಬೆಂಗಳೂರು(ಪಿಟಿಐ): ಬೀಗಮುದ್ರೆ ಮಾ. 24ರಂದು ತೆರವುಗೊಂಡ ನಂತರ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಪುನರಾ ರಂಭಿಸಲು ಸಿದ್ಧವಿದ್ದೇವೆ. ಆದರೆ, ಆಡ ಳಿತ ಮಂಡಳಿಯ ಯಾವುದೇ ಷರತ್ತು ಗಳನ್ನು ಒಪ್ಪುವುದಾಗಲೀ, ಸಹಿ ಹಾಕು ವುದಾಗಲೀ ಸಾಧ್ಯವಿಲ್ಲ ಎಂದು ಟೋಯೊಟಾ ಕಿರ್ಲೋಸ್ಕರ್ ಕಾರ್ಮಿಕ ಸಂಘಟನೆ(ಟಿಕೆಎಂಇಯು) ಹೇಳಿದೆ.
ಇಲ್ಲಿ ಶನಿವಾರ ಕಾರ್ಮಿಕ ಸಂಘಟ ನೆಯ ಮಹಾಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ‘ಟಿಕೆಎಂಇಯು’ ಅಧ್ಯಕ್ಷ ಪ್ರಸನ್ನ ಕುಮಾರ್, ಆಡಳಿತ ಮಂಡಳಿ ಹೇಳಿ ರುವಂತೆ ಯಾವುದೇ ಷರತ್ತುಗಳಿಗೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪ ಡಿಸಿದರು.
ಬಿಡದಿ ಬಳಿ ಇರುವ ಕಾರು ತಯಾರಿ ಕೆಯ ಎರಡೂ ಘಟಕಗಳಿಗೆ ‘ಟೋಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈ.ಲಿ.’ ಮಾ. 16 ರಂದು ಬೀಗಮುದ್ರೆ ಘೋಷಿಸಿತ್ತು. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆ ಮಧ್ಯೆ ಸಂಧಾನ ನಡೆಸಿತು. ನಂತರ ಆಡಳಿತ ಮಾ. 24ರಂದು ಬೀಗಮುದ್ರೆ ತೆರವುಗೊಳಿಸುವುದಾಗಿ ಘೋಷಿಸಿತು. ಜತೆಗೆ, ಕಾರ್ಖಾನೆಯೊಳಗಿನ ನಡವಳಿಕೆ ಕುರಿತು ಕಾರ್ಮಿಕರು ಬದ್ಧತೆ ಪ್ರದರ್ಶಿ ಸಬೇಕಿದೆ. ಜತೆಗೆ ಈ ಬಗ್ಗೆ ಕೆಲವು ಷರತ್ತುಗಳಿಗೆ ಸಹಿ ಹಾಕಬೇಕಿದೆ ಎಂದು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.