ADVERTISEMENT

ಡಿಎಚ್‍ಎಲ್‍ನಿಂದ ಸ್ಮಾರ್ಟ್‌ಟ್ರಕ್ ಸೇವೆ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST

ಬೆಂಗಳೂರು: ಸರಕು ಸಾಗಣೆ ಸೇವೆಯನ್ನು ಒದಗಿಸುವ ಡಿಎಚ್‌ಎಲ್‌ ಸಮೂಹವು ‘ಡಿಎಚ್‌ಎಲ್‌ ಸ್ಮಾರ್ಟ್‌ಟ್ರಕ್‌ ಸೇವೆಯನ್ನು ಆರಂಭಿಸಿದೆ.

ಇದು ತಂತ್ರಜ್ಞನ ಆಧಾರಿತ ಲಾಜಿಸ್ಟಿಕ್‌ ಪರಿಹಾರವಾಗಿದೆ. ದೇಶದ ರಸ್ತೆ ಜಾಲದಲ್ಲಿ ಅತಿ ವೇಗದಲ್ಲಿ ಸರಕು ಸಾಗಣೆಗೆ ಅವಕಾಶ ಮಾಡಿಕೊಡಲಿದೆ. 

ಪ್ರಸ್ತುತ ಭಾರತದಲ್ಲಿ ರಸ್ತೆ ಮಾರ್ಗದಲ್ಲಿಯೇ ಹೆಚ್ಚಿನ ಪ್ರಮಾಣದ ಸರಕು ಸಾಗಣೆ ನಡೆಯುತ್ತಿದೆ. ಹೀಗಾಗಿ ಡಿಎಚ್‌ಎಲ್ ಸ್ಮಾರ್ಟ್‌ಟ್ರಕ್‌ ಮೂಲಕ ಪ್ರತಿದಿನ 1 ಲಕ್ಷ ಟನ್‍ಗಳಷ್ಟು ಸರಕನ್ನು ಸಾಗಿಸುವುದಲ್ಲದೇ, 40 ಲಕ್ಷ  ಕಿಲೋಮೀಟರ್‌ ದೂರವನ್ನು ಕ್ರಮಿಸಲಾಗುವುದು’ ಎಂದು ಡಿಎಚ್‍ಎಲ್ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.