
ಪ್ರಜಾವಾಣಿ ವಾರ್ತೆ
ನವದೆಹಲಿ (ಪಿಟಿಐ): ಎರಡೂ ಬದಿಯಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದ (ಡಿಟಿಎಸಿ) ಪರಿಷ್ಕರಣೆ ಕುರಿತು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ದಕ್ಷಿಣ ಕೊರಿಯಾದ ವಾಣಿಜ್ಯ ಸಚಿವ ಜೆವಾನ್ ಬಾಕ್ ಶುಕ್ರವಾರ ರಾತ್ರಿ ಸಿಯೋಲ್‌ನಲ್ಲಿ ಚರ್ಚೆ ನಡೆಸಿದರು.
ಉಭಯ ದೇಶಗಳ ವಾಣಿಜ್ಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಜತೆ ನಡೆದ ಈ ಸಭೆಯಲ್ಲಿ `ಡಿಟಿಎಸಿ~ ಪರಿಷ್ಕರಣೆ, ತೆರಿಗೆ ಮಾಹಿತಿ ವಿನಿಮಯ, ಅಬಕಾರಿ ಮತ್ತು ಸೀಮಾ ಸುಂಕ ವ್ಯವಸ್ಥೆ ಆಧುನೀಕರಣ ಇತ್ಯಾದಿ ಅಂಶಗಳ ಕುರಿತು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.