ನವದೆಹಲಿ(ಪಿಟಿಐ): ಚಿನ್ನ ಮತ್ತು ಬೆಳ್ಳಿ ಆಮದು ತಗ್ಗಿದ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ದೇಶದ ವ್ಯಾಪಾರ ಕೊರತೆಯು 1,220 ಕೋಟಿ ಡಾಲರ್‌ಗಳಿಗೆ ತಗ್ಗಿದೆ.
`ಜೂನ್‌ನಲ್ಲಿ ರಫ್ತು ವಹಿವಾಟು ಶೇ 4ರಷ್ಟು ಕುಸಿತ ಕಂಡಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಕೆಲವು ಕಠಿಣ ಕ್ರಮಗಳಿಂದ ಚಿನ್ನಾಭರಣಗಳ ಆಮದು ಗಣನೀಯವಾಗಿ ತಗ್ಗಿದೆ. ಇದರಿಂದ ವ್ಯಾಪಾರ ಕೊರತೆ ಇಳಿಕೆ ಕಂಡಿದೆ' ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.
ಮೇ ತಿಂಗಳಲ್ಲಿ 840 ಕೋಟಿ ಡಾಲರ್‌ಗಳಷ್ಟಿದ್ದ ಚಿನ್ನ ಮತ್ತು ಬೆಳ್ಳಿ ಆಮದು ಜೂನ್‌ನಲ್ಲಿ 245 ಕೋಟಿ ಡಾಲರ್‌ಗಳಿಗೆ ಇಳಿದಿದೆ. `ಚಿನ್ನ ಆಮದು ತಗ್ಗಿರುವ ಜತೆಗೆ ರಫ್ತು ವಹಿವಾಟು ಚೇತರಿಕೆ ಕಂಡರೆ ವ್ಯಾಪಾರ ಕೊರತೆ ಇನ್ನಷ್ಟು ತಗ್ಗಲಿದೆ' ಎಂದು ವಿದೇಶಿ ವ್ಯಾಪಾರ ಇಲಾಖೆಯ ಮಹಾನಿರ್ದೇಶಕ ಅನೂಪ್ ಪೂಜಾರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.