ADVERTISEMENT

`ನಕಲಿ ಐಎಂಇಐ 1300 ಪ್ರಕರಣ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮೊಬೈಲ್ ಫೋನ್ ಗುರುತಿನ ಸಂಖ್ಯೆ(ಐಎಂಇಐ)ಗೆ ಬದಲಾಗಿ ನಕಲಿ ಸಂಖ್ಯೆ ಬಳಸುತ್ತಿರುವುದರ ಸಂಬಂಧ 2009ರಿಂದ 2012ರವರೆಗೆ ಒಟ್ಟು 1,300 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಮಿಲಿಂದ್ ದೇವ್ರಾ ಲೋಕಸಭೆಗೆ ತಿಳಿಸಿದರು.
 
ಒಂದೇ `ಐಎಂಇಐ' ಸಂಖ್ಯೆಯನ್ನು 100ಕ್ಕೂ ಹೆಚ್ಚು ಹ್ಯಾಂಡ್‌ಸೆಟ್‌ಗಳಲ್ಲಿ ಬಳಸಲಾಗಿದೆ. 2010 ಮತ್ತು 11ರಲ್ಲಿ ಕ್ರಮವಾಗಿ ಇಂತಹ 749 ಮತ್ತು 569 ಪ್ರಕರಣ ವರದಿಯಾಗಿವೆ ಎಂದು ಅವರು ವಿವರ ನೀಡಿದರು.
 
ಚೀನಾ ಸೇರಿದಂತೆ ವಿದೇಶಗಳಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುವ ಅಗ್ಗದ ದರದ ಬ್ರಾಂಡೆಡ್ ರಹಿತ ಹ್ಯಾಂಡ್‌ಸೆಟ್‌ಗಳಲ್ಲಿ ಒಂದೇ ರೀತಿಯ `ಐಎಂಇಐ' ಸಂಖ್ಯೆ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.