ADVERTISEMENT

‘ನಗದು ಲಭ್ಯತೆ ಸುಧಾರಣೆ’

₹ 500 ನೋಟುಗಳ ಮುದ್ರಣಕ್ಕೆ ಒತ್ತು: ಗರ್ಗ್‌ ಹೇಳಿಕೆ

ಪಿಟಿಐ
Published 7 ಮೇ 2018, 4:08 IST
Last Updated 7 ಮೇ 2018, 4:08 IST
‘ನಗದು ಲಭ್ಯತೆ ಸುಧಾರಣೆ’
‘ನಗದು ಲಭ್ಯತೆ ಸುಧಾರಣೆ’   

ಮನಿಲಾ: ‘ಹೆಚ್ಚುವರಿ ಬೇಡಿಕೆ ಪೂರೈಸಲು ಪ್ರತಿ ದಿನ ₹ 500 ಮುಖಬೆಲೆಯ ₹ 3 ಸಾವಿರ ಕೋಟಿ ಮೊತ್ತದ ನೋಟುಗಳನ್ನು ಮುದ್ರಿಸ
ಲಾಗುತ್ತಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್ ಹೇಳಿದ್ದಾರೆ.

‘ಕಳೆದ ವಾರ ದೇಶದಲ್ಲಿನ ನಗದು ಲಭ್ಯತೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಶೇ 85ರಷ್ಟು ಎಟಿಎಂಗಳು ಸಮ‌ರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಸದ್ಯಕ್ಕೆ ನಗದು ಲಭ್ಯತೆ ಪರಿಸ್ಥಿತಿ ಸುಧಾರಿಸಿದೆ.

‘ಹೆಚ್ಚುವರಿ ಬೇಡಿಕೆಯನ್ನೂ ಸಂಪೂರ್ಣವಾಗಿ ಈಡೇರಿಸಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ನೋಟುಗಳನ್ನು ಪೂರೈಸಲಾಗಿದೆ. ನಗದಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘₹ 2 ಸಾವಿರ ಮುಖಬೆಲೆಯ ₹ 7 ಲಕ್ಷ ಕೋಟಿಗಳಷ್ಟು ಮೊತ್ತದ ನೋಟುಗಳು ಚಲಾವಣೆಯಲ್ಲಿ ಇವೆ. ಇದು ಅಗತ್ಯಕ್ಕಿಂತ ಹೆಚ್ಚಿಗೆ ಇದೆ. ಹೀಗಾಗಿ ಹೊಸದಾಗಿ ₹ 2000 ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿಲ್ಲ.

‘ದಿನನಿತ್ಯದ ವಹಿವಾಟಿನಲ್ಲಿ ಜನರು ₹ 100, ₹  200 ಮತ್ತು ₹ 500 ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಬಳಸುತ್ತಾರೆ. ₹ 500 ಮುಖಬೆಲೆಯ ನೋಟುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಲಾಗಿದೆ. ಜನರ ವಹಿವಾಟಿನ ಅಗತ್ಯಗಳನ್ನು ಪೂರೈಸಲು ಕಾಳಜಿ ವಹಿಸಲಾಗಿದೆ’ ಎಂದು ಹೇಳಿದ್ದಾರೆ.

ಮುಖ್ಯಾಂಶಗಳು

* ಹೆಚ್ಚುವರಿ ಬೇಡಿಕೆ ಪೂರೈಸಲು ಕ್ರಮ

* ಶೇ 85 ರಷ್ಟು ಎಟಿಎಂಗಳ ಸಮರ್ಪಕ ಕಾರ್ಯ ನಿರ್ವಹಣೆ

* ₹ 2,000 ನೋಟುಗಳ ಚಲಾವಣೆ ಅಗತ್ಯಕ್ಕಿಂತ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.