ADVERTISEMENT

ನಾಸಿಕ್: ಈರುಳ್ಳಿ ಹರಾಜು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ನಾಸಿಕ್ (ಪಿಟಿಐ): ದೇಶದಲ್ಲಿಯೇ ಅತಿ ಹೆಚ್ಚು ಈರುಳ್ಳಿ ವಹಿವಾಟು ನಡೆಸುವ ನಾಸಿಕ್ ಜಿಲ್ಲೆ ವ್ಯಾಪ್ತಿಯ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗಳಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿವ ರೆಗೂ ಈರುಳ್ಳಿ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದು ದೇಶದ ಹಲವೆಡೆಯ ಈರುಳ್ಳಿ ವಹಿವಾಟು ಮತ್ತು ಧಾರಣೆ ಮೇಲೆ ಭಾರಿ ಪರಿಣಾಮ ಬೀರುವ ಸಂಭವವಿದೆ.

ನಾಸಿಕ್ ಜಿಲ್ಲೆಯ ಲಾಸಲ್‌ಗಾಂವ್ ಮತ್ತು ಪಿಂಪಲ್‌ಗಾಂವ್ ಬಸ್ವಂತ್ ಎಪಿಎಂಸಿ ಈರುಳ್ಳಿಯ ದೊಡ್ಡ ಹರಾಜು ಕಟ್ಟೆಯಾಗಿವೆ. ಇಲ್ಲಿಯೂ ಹರಾಜು ನಿಲುಗಡೆಗೊಂಡಿದೆ.

`ಇಲ್ಲಿನ ವರ್ತಕರು ಮತ್ತು ತೂಕ ಹಾಕುವ ಸಿಬ್ಬಂದಿ ನಡುವಿನ ವಿವಾದವೇ ಈರುಳ್ಳಿ ಹರಾಜು ದಿಢೀರ್ ಸ್ಥಗಿತಕ್ಕೆ ಕಾರಣ. ಹರಾಜು ಮತ್ತೆ ಯಾವಾಗ ಆರಂಭಗೊಳ್ಳಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ~ ಎಂದು ಲಾಸಲ್‌ಗಾಂವ್ ಎಪಿಎಂಸಿ ಅಧ್ಯಕ್ಷ ಜೈದತ್ತ ಹೋಳ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.