ADVERTISEMENT

ನೆಸ್‌ ಡಿಜಿಟಲ್‌: ಸಂಶೋಧನಾ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಹೊಸ ಸಂಶೋಧನಾ ಕೇಂದ್ರವನ್ನು ಎಸ್‌ಆ್ಯಂಡ್‌ಪಿ ಗ್ಲೋಬಲ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ನಿಕ್‌ ಕ್ಯಾಫೆರಿಲ್ಲೊ ಮತ್ತು ನೆಸ್‌ ಡಿಜಿಟಲ್‌ ಎಂಜಿನಿಯರಿಂಗ್‌ನ ಸಿಇಒ ಪೌಲ್‌ ಲೊಂಬಾರ್ಡೊ ಉದ್ಘಾಟಿಸಿದರು
ಹೊಸ ಸಂಶೋಧನಾ ಕೇಂದ್ರವನ್ನು ಎಸ್‌ಆ್ಯಂಡ್‌ಪಿ ಗ್ಲೋಬಲ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ನಿಕ್‌ ಕ್ಯಾಫೆರಿಲ್ಲೊ ಮತ್ತು ನೆಸ್‌ ಡಿಜಿಟಲ್‌ ಎಂಜಿನಿಯರಿಂಗ್‌ನ ಸಿಇಒ ಪೌಲ್‌ ಲೊಂಬಾರ್ಡೊ ಉದ್ಘಾಟಿಸಿದರು   

ಬೆಂಗಳೂರು: ಡಿಜಿಟಲ್‌ ಬದಲಾವಣೆಯ ತಂತ್ರಜ್ಞಾನ ಮತ್ತು ಗ್ರಾಹಕರ ಅಗತ್ಯಗಳಿಗೆ ಪೂರಕವಾದ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಸೇವೆಗಳನ್ನು ಒದಗಿಸುವ ನೆಸ್‌ ಡಿಜಿಟಲ್‌ ಎಂಜಿನಿಯರಿಂಗ್, ಹೈದರಾಬಾದ್‌ನಲ್ಲಿ ಹೊಸ ಸಂಶೋಧನಾ (ಓರಾಯನ್‌) ಕೇಂದ್ರ ಆರಂಭಿಸಿದೆ.

ಎಸ್‌ಆ್ಯಂಡ್‌ಪಿ ಗ್ಲೋಬಲ್‌ನ ಸಹಯೋಗದಲ್ಲಿ ಈ ಕೇಂದ್ರ ಆರಂಭಿಸಲಾಗಿದೆ. ಈ ಪ್ರದೇಶದಲ್ಲಿನ ತಂತ್ರಜ್ಞಾನ, ದತ್ತಾಂಶ ನಿರ್ವಹಣೆ ಮತ್ತು ಪ್ರಮುಖ ಸೇವೆಗಳನ್ನು ನಿರ್ವಹಿಸುತ್ತಿರುವ ಪ್ರತಿಭಾನ್ವಿತ ತಂತ್ರಜ್ಞರಿಗೆ ನೆರವಾಗುತ್ತಿರುವ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಈ ಹೊಸ ಕೇಂದ್ರವು ಪೂರಕವಾಗಿ ಕೆಲಸ ಮಾಡಲಿದೆ. ಈ ಹೊಸ ಸಂಶೋಧನಾ ಕೇಂದ್ರವು  ಪ್ರತಿಭಾನ್ವಿತರಿಗೆ ಜಾಗತಿಕ ಗುಣಮಟ್ಟದ ಕೆಲಸದ ಪರಿಸರ ಒದಗಿಸಲಿದೆ. ‘ಎಸ್‌ಆ್ಯಂಡ್‌ಪಿ’ನ ವೈವಿಧ್ಯಮಯ ವಹಿವಾಟಿನ ಜಾಗತಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ.

ಈ ಓರಾಯನ್‌ ಕೇಂದ್ರದಲ್ಲಿ 850ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡಬಹುದಾಗಿದೆ. ಈ ತಂತ್ರಜ್ಞರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಸಂವಹನ ಮೂಲ ಸೌಕರ್ಯಗಳ ನೆರವಿನಿಂದ ಇತರ ತಂಡಗಳ ಜೊತೆಗೆ ಸಮನ್ವಯತೆಯಿಂದ ದಕ್ಷ ರೀತಿಯಲ್ಲಿ ಕೆಲಸ ಮಾಡಲು ಇಲ್ಲಿ ಪೂರಕ ವಾತಾವರಣ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.