ADVERTISEMENT

ಪಿಎನ್‌ಬಿ: ರೂ1275 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ1275 ಕೋಟಿ ನಿವ್ವಳ ಲಾಭ ಗಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ ವಹಿವಾಟು ಶೇ 39.5ರಷ್ಟು ಪ್ರಗತಿ ಕಂಡಿದೆ. ಸಾಗರೋತ್ತರ ವಹಿವಾಟು ರೂ50 ಸಾವಿರ ಕೋಟಿ ಗಡಿ ದಾಟಿದೆ ಎಂದು ಇತ್ತೀಚೆಗೆ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಕಾಮತ್ ತಿಳಿಸಿದರು.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕಿನ ಜಾಗತಿಕ ಠೇವಣಿ ರೂ3.95 ಲಕ್ಷ ಕೋಟಿಯಷ್ಟಾಗಿದೆ. `ಸಿಎಎಸ್‌ಎ' ಠೇವಣಿ ರೂ1.50 ಲಕ್ಷ ಕೋಟಿಯಷ್ಟಾಗಿದ್ದು ಶೇ 12.6ರಷ್ಟು ವಾರ್ಷಿಕ ಪ್ರಗತಿ ಕಂಡಿದೆ. ಉಳಿತಾಯ ಠೇವಣಿ ರೂ1.23 ಲಕ್ಷ ಕೋಟಿಯಷ್ಟಾಗಿದ್ದು ಶೇ 14.7 ರಷ್ಟು ಪ್ರಗತಿ ಕಂಡಿದೆ.
ಸಾಲ ಮತ್ತು ಠೇವಣಿ ಅನುಪಾತ ಕಳೆದ ವರ್ಷದ ಶೇ 76.41ರಿಂದ ಶೇ 76.88ಕ್ಕೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.