ADVERTISEMENT

ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ ಶೇ 4ರಷ್ಟು ಕಡಿತ: ಗುಜರಾತ್‌ ಸರ್ಕಾರ

ಪಿಟಿಐ
Published 10 ಅಕ್ಟೋಬರ್ 2017, 6:53 IST
Last Updated 10 ಅಕ್ಟೋಬರ್ 2017, 6:53 IST
ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ ಶೇ 4ರಷ್ಟು ಕಡಿತ: ಗುಜರಾತ್‌ ಸರ್ಕಾರ
ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ ಶೇ 4ರಷ್ಟು ಕಡಿತ: ಗುಜರಾತ್‌ ಸರ್ಕಾರ   

ಗಾಂಧಿನಗರ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್‌)ಯನ್ನು ಶೇ 4ರಷ್ಟು ಇಳಿಕೆ ಮಾಡಲು ಗುಜರಾತ್‌ ಸರ್ಕಾರ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ವಿಜಯ್‌ ರುಪಾನಿ ಮಂಗಳವಾರ ಹೇಳಿದರು.

ಕೇಂದ್ರ ಸರ್ಕಾರ ಸೂಚಿಸಿದಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಮಂಗಳವಾರ ಮಧ್ಯರಾತ್ರಿಯಿಂದಲೇ ಶೇ 4ರಷ್ಟು ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿರುವುದಾಗಿ ಪ್ರಕಟಿಸಿದರು.

ತೆರಿಗೆ ಕಡಿತದಿಂದಾಗಿ ಗುಜರಾತ್‌ನಲ್ಲಿ ಪೆಟ್ರೋಲ್‌ ದರ ₹2.93 ಹಾಗೂ ಡೀಸೆಲ್‌ ದರ ₹2.72ರಷ್ಟು ಇಳಿಕೆಯಾಗಲಿದೆ. ವ್ಯಾಟ್‌ ಕಡಿತ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ ₹2,316 ಕೋಟಿ ಹೊರೆಯಾಗಲಿದೆ. ಆದರೂ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ADVERTISEMENT

ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ₹2ರಷ್ಟು ಕಡಿತಗೊಳಿಸಿತ್ತು.

ದೀ‍ಪಾವಳಿಗೂ ಮುನ್ನ ತೈಲದ ಮೇಲಿನ ತೆರಿಗೆ ಇಳಿಕೆ ನಿರ್ಧಾರ ಪ್ರಕಟಗೊಂಡಿದೆ. ವರ್ಷದ ಅಂತ್ಯಕ್ಕೆ ಗುಜರಾತ್‌ ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.