ADVERTISEMENT

ಪೆಟ್ರೋಲ್‌ ಬೆಲೆ 7 ಪೈಸೆ ಅಗ್ಗ

ಪಿಟಿಐ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಪೆಟ್ರೋಲ್‌ ಬೆಲೆ 7 ಪೈಸೆ ಅಗ್ಗ
ಪೆಟ್ರೋಲ್‌ ಬೆಲೆ 7 ಪೈಸೆ ಅಗ್ಗ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಗುರುವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 7 ಮತ್ತು 5 ಪೈಸೆಗಳಷ್ಟು ತಗ್ಗಿಸಿವೆ. ಮೇ 14ರಿಂದೀಚೆಗೆ 16 ದಿನಗಳವರೆಗೆ ನಿರಂತರವಾಗಿ ದರ ಏರಿಕೆ ಮಾಡಲಾಗಿತ್ತು.

ಇದರಿಂದ ಪೆಟ್ರೋಲ್‌ ₹ 3.7 ಮತ್ತು ಡೀಸೆಲ್‌ ಬೆಲೆ ₹ 3.38ರಷ್ಟು ತುಟ್ಟಿಯಾಗಿತ್ತು.

ಸಂವೇದಿ ಸೂಚ್ಯಂಕ 416 ಅಂಶ ಏರಿಕೆ

ADVERTISEMENT

ಮುಂಬೈ: ಮುಂಬೈ ಷೇರುಪೇಟೆಯು ಗುರುವಾರದ ವಹಿವಾಟಿನಲ್ಲಿ 416 ಅಂಶಗಳಷ್ಟು ಭಾರಿ ಚೇತರಿಕೆ ದಾಖಲಿಸಿತು.

ಬ್ಯಾಂಕಿಂಗ್‌, ಇಂಧನ ಷೇರುಗಳಲ್ಲಿನ ಖರೀದಿ ಭರಾಟೆಯ ಫಲವಾಗಿ ಸೂಚ್ಯಂಕವು ಎರಡು ವಾರಗಳ ಗರಿಷ್ಠ ಮಟ್ಟವಾದ 35,322 ಅಂಶಗಳಿಗೆ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) 10,700 ಅಂಶಗಳ ಗಡಿ ದಾಟಿತು.

ಎ.ಐ ಷೇರು ಮಾರಾಟಕ್ಕೆ ಹಿನ್ನಡೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾದ (ಎ.ಐ) ಷೇರು ಮಾರಾಟಕ್ಕೆ ತೀವ್ರ ಹಿನ್ನಡೆಯಾಗಿದೆ.

ನಷ್ಟದ ಸುಳಿಯಲ್ಲಿ ಸಿಲುಕಿರುವ ‘ಎ.ಐ’ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಶೇ 76ರಷ್ಟು ಪಾಲು ಬಂಡವಾಳ ಖರೀದಿಸಲು ಯಾವುದೇ ಸಂಸ್ಥೆಯು ಆಸಕ್ತಿ ತೋರಿಸಿಲ್ಲ. ಬಿಡ್‌ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.