ಬೆಂಗಳೂರು: ದೇಶದ ಅತಿದೊಡ್ಡ ಮೊಬೈಲ್ ವಾಲೆಟ್ ಆಗಿರುವ ಪೇಟಿಎಂ, ವಿಮೆ ಸೌಲಭ್ಯಕ್ಕೆ ಚಾಲನೆ ನೀಡಿದೆ. ವಾಲೆಟ್ನಲ್ಲಿ ಇರುವ ಗ್ರಾಹಕರ ಮತ್ತು ವರ್ತಕರ ಹಣದ ದುರ್ಬಳಕೆ ತಡೆಗಟ್ಟಲು ಈ ವಿಮೆ ಸೌಲಭ್ಯ ಜಾರಿಗೆ ತರಲಾಗಿದೆ.
ವಂಚನೆ ಸ್ವರೂಪದ ವಹಿವಾಟು, ಮೊಬೈಲ್ ಕಳ್ಳತನ, ವಾಲೆಟ್ ದುರ್ಬಳಕೆಯಂತಹ ಸಂದರ್ಭಗಳಲ್ಲಿ ನಡೆದ ವಹಿವಾಟಿನ ಮೊತ್ತವನ್ನು ಮರಳಿಸಲಾಗುವುದು. ಈ ವಿಮೆ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ.
ವಾಲೆಟ್ನಲ್ಲಿನ ಹಣಕ್ಕೆ ಸಂಪೂರ್ಣ ಸುರಕ್ಷತೆ ಒದಗಿಸಲು ಸಂಸ್ಥೆ ಈ ಕ್ರಮ ಕೈಗೊಂಡಿದೆ. ವಾಲೆಟ್ನಲ್ಲಿನ ಹಣ ಅಥವಾ ಗರಿಷ್ಠ ₹ 20 ಸಾವಿರದ ಮೊತ್ತಕ್ಕೆ ವಿಮೆ ರಕ್ಷಣೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.