ADVERTISEMENT

ಫಿನೊ ಪೇಮೆಂಟ್ಸ್‌ ಬ್ಯಾಂಕ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಮುಂಬೈನಲ್ಲಿ ನಡೆದ ಬ್ಯಾಂಕ್‌ನ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕ್‌ನ ಸಿಇಒ ರಿಷಿ ಗುಪ್ತ, ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ನಿನ ಸಿಎಂಡಿ ಡಿ. ರಾಜ್‌ಕುಮಾರ್‌ ಮತ್ತು ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಮಹೇಂದ್ರಕುಮಾರ್‌ ಚೌಹಾಣ್‌ ಉಪಸ್ಥಿತರಿದ್ದರು   ಪಿಟಿಐ ಚಿತ್ರ

ಮುಂಬೈ: ಫಿನೊ ಪೇಮೆಂಟ್ಸ್‌ ಬ್ಯಾಂಕ್‌  ಸೋಮವಾರದಿಂದ 14 ರಾಜ್ಯಗಳಲ್ಲಿ ಕಾರ್ಯಾರಂಭ ಮಾಡಿದೆ.

ಆರಂಭದ ದಿನದಿಂದಲೇ 410 ಶಾಖೆಗಳು ಕಾರ್ಯಾರಂಭ ಮಾಡಿವೆ. ‘ಭೌತಿಕ ಸ್ವರೂಪದ ಮತ್ತು ಡಿಜಿಟಲ್‌ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಸರಳ ಮತ್ತು ಅನುಕೂಲಕರ ಬ್ಯಾಂಕಿಂಗ್‌ ಸೌಲಭ್ಯ ಒದಗಿಸುವುದು ನಮ್ಮ  ಉದ್ದೇಶವಾಗಿದೆ’ ಎಂದು ಬ್ಯಾಂಕ್‌ನ ಸಿಇಒ ರಿಷಿ ಗುಪ್ತ ಹೇಳಿದ್ದಾರೆ.

ಉಳಿತಾಯ, ಚಾಲ್ತಿ ಖಾತೆ, ಮೊಬೈಲ್‌ ಬ್ಯಾಂಕಿಂಗ್‌, ವಿಮೆ ಸೌಲಭ್ಯಗಳು ಈ ಶಾಖೆಗಳಲ್ಲಿ ಲಭ್ಯ ಇರಲಿವೆ. ಗ್ರಾಹಕರಿಗೆ ತಕ್ಷಣ ಖಾತೆ ತೆರೆಯುವ ಸೌಲಭ್ಯ ಒದಗಿಸಲಾಗಿದೆ.

ADVERTISEMENT

ಮೊದಲ ವರ್ಷ 40 ಲಕ್ಷದವರೆಗೆ ಗ್ರಾಹಕರನ್ನು ಹೊಂದುವ ಗುರಿ ನಿಗದಿಪಡಿಸಲಾಗಿದೆ. ಕ್ರಮೇಣ ಶಾಖೆಗಳ ಸಂಖ್ಯೆಯನ್ನು ಒಂದು ಸಾವಿರಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.