ADVERTISEMENT

ಬಜಾಜ್ ಐಒಟಿ ತಂತ್ರಜ್ಞಾನ ಏರ್‌ಕೂಲರ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಹೊಸ ಏರ್‌ ಕೂಲರ್ ಜತೆ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅನಂತ್‌ ಬಜಾಜ್‌
ಹೊಸ ಏರ್‌ ಕೂಲರ್ ಜತೆ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅನಂತ್‌ ಬಜಾಜ್‌   

ಬೆಂಗಳೂರು: ಗೃಹೋಪಯೋಗಿ ವಿದ್ಯುತ್‌ ಉಪಕರಣಗಳ ತಯಾರಿಕಾ ಸಂಸ್ಥೆ ಬಜಾಜ್ ಎಲೆಕ್ಟ್ರಿಕಲ್ಸ್, ಮೊದಲ ಬಾರಿಗೆ ಐಒಟಿ (ಇಂಟರ್‌ನೆಟ್‌ ಆಫ್‌ ಥಿಂಗ್ಸ್) ತಂತ್ರಜ್ಞಾನ ಆಧಾರಿತ ‘ಕೂಲ್‌.ಐಎನ್‌ಎಕ್ಸ್‌ಟಿ’ ಹೆಸರಿನ ಏರ್‌ ಕೂಲರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಕೂಲರ್‌ ಮೂಲಕ ಗ್ರಾಹಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ಒದಗಿಸಲು ಸಂಸ್ಥೆ ನಿರ್ಧರಿಸಿದೆ. ಐಒಟಿ ತಂತ್ರಜ್ಞಾನ ಆಧಾರಿತ ಉಪಕರಣಗಳಿಗೆ ಭವಿಷ್ಯದಲ್ಲಿ ಉತ್ತಮ ಬೇಡಿಕೆ ಇರುವುದನ್ನು ಪರಿಗಣಿಸಿ ಈ ರೀತಿಯ ಉಪಕರಣಗಳನ್ನು ತಯಾರಿಸುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಲು ಸಂಸ್ಥೆ ನಿರ್ಧರಿಸಿದೆ.

ಈ ಉಪಕರಣಕ್ಕಾಗಿಯೇ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್‌ಫೋನ್‌ ಮತ್ತು ಅಂತರ್ಜಾಲ ಬಳಸಿ ವಿಶ್ವದ ಯಾವುದೇ ಮೂಲೆಯಿಂದಲೂ ಇದನ್ನು  ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ.

ADVERTISEMENT

ಕೋಣೆಯ ವಾತಾವರಣಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಇದಕ್ಕೆ ವಿಶೇಷ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ‘ದೇಶದ ಮೊದಲ ಐಒಟಿ ತಂತ್ರಜ್ಞಾನ ಆಧಾರಿತ ಏರ್‌ ಕೂಲರ್‌ ಅನ್ನು ನಮ್ಮ ಸಂಸ್ಥೆ ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ’ ಎಂದು ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅನಂತ್‌ ಬಜಾಜ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.