ಬೆಂಗಳೂರು: ಗ್ರಾಮೀಣ ಮತ್ತು ಅರೆನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಜಾಜ್ ಆಟೊ ಸುಧಾರಿತ `ಬಾಕ್ಸರ್ 150ಸಿಸಿ~ ಬೈಕ್ ಅನ್ನು ಶುಕ್ರವಾರ ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
`ಭಾರತ್ ಬೈಕ್~ ಎಂದು ಹೆಸರಿಸಲಾಗಿರುವ ಈ ಬೈಕಿನ ಬೆಂಗಳೂರು ಎಕ್ಸ್‌ಷೋರೂಂ ಬೆಲೆ ರೂ 42,660. ಗ್ರಾಮೀಣ ಮತ್ತು ಕಚ್ಚಾ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರಿಕ್ ಸ್ಟಾರ್ಟರ್ ಜತೆಗೆ 55 ಕಿ.ಮೀ ಇಂಧನ ಕ್ಷಮತೆ ಹೊಂದಿದೆ.
150 ಸಿಸಿ ಸರಣಿಯಲ್ಲಿ ಅತ್ಯಂತ ಕಡಿಮೆ ಬೆಲೆ ಮತ್ತು ಉನ್ನತ ದರ್ಜೆ ತಂತ್ರಜ್ಞಾನ ಹೊಂದಿರುವ ಬೈಕ್ ಇದಾಗಿದೆ ಎಂದು ಬಜಾಜ್ ಆಟೊ ಲಿಮಿಟೆಡ್‌ನ ಮಾರುಕಟ್ಟೆ ವ್ಯವಸ್ಥಾಪಕ ಚಂದ್ರಶೇಖರ್ ಆರ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.