ADVERTISEMENT

ಬಿಎಚ್‌ಇಎಲ್‌ನಿಂದ ₹386 ಕೋಟಿ ಲಾಭಾಂಶ ವಿತರಣೆ

ಪಿಟಿಐ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ (ಬಿಎಚ್‌ಇಎಲ್‌) 2016–17ನೇ ಆರ್ಥಿಕ ವರ್ಷಕ್ಕೆ ಷೇರುದಾರರಿಗೆ ₹386.72 ಕೋಟಿ (ಶೇ 79) ಲಾಭಾಂಶ ವಿತರಿಸಿದೆ.

ಮಧ್ಯಂತರ ಲಾಭಾಂಶ ಶೇ 40 ಮತ್ತು ಅಂತಿಮ ಲಾಭಾಂಶ ಶೇ 39 ರಷ್ಟು ಸೇರಿ ಒಟ್ಟು ಲಾಭಾಂಶ ಶೇ 79 ರಷ್ಟಾಗಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಬಿಎಚ್‌ಇಎಲ್‌ನಲ್ಲಿ ಶೇ 63.06 ರಷ್ಟು ಷೇರು ಪಾಲು ಹೊಂದಿದೆ. ಹಾಗಾಗಿ ಬಿಎಚ್‌ಎಎಲ್ ಅಧ್ಯಕ್ಷ ಅತುಲ್‌ ಸಬೋಟಿ ಅವರು ಬೃಹತ್‌ ಉದ್ಯಮ ಸಚಿವ ಅನಂತ ಗೀತೆ ಅವರಿಗೆ 2016–17ಕ್ಕೆ ₹120.39 ಕೋಟಿ ಮೊತ್ತದ ಲಾಭಾಂಶದ ಚೆಕ್ ಅನ್ನು ನೀಡಿದರು. ಮಧ್ಯಂತರ ಲಾಭಾಂಶವೂ ಸೇರಿ ಸರ್ಕಾರಕ್ಕೆ ಒಟ್ಟಾರೆ ₹244 ಕೋಟಿ ನೀಡಿದಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.