ADVERTISEMENT

ಬಿಎಸ್‌ಇ, ಎನ್‌ಎಸ್‌ಇ ದಾಖಲೆ ವಹಿವಾಟು

ಪಿಟಿಐ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಬಿಎಸ್‌ಇ, ಎನ್‌ಎಸ್‌ಇ ದಾಖಲೆ ವಹಿವಾಟು
ಬಿಎಸ್‌ಇ, ಎನ್‌ಎಸ್‌ಇ ದಾಖಲೆ ವಹಿವಾಟು   

ಮುಂಬೈ:  ದೇಶದ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ಏರಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 355 ಅಂಶ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 31,768 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಈ ಹಿಂದೆ ಮೇ 25 ರಂದು ಸೂಚ್ಯಂಕ 31,716 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 105 ಅಂಶ ಹೆಚ್ಚಾಗಿ 9,771 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಈ ಮೂಲಕ ಈ ಹಿಂದೆ ದಾಖಲಾಗಿದ್ದ 9,675 ಅಂಶಗಳ ದಾಖಲೆ ಮಟ್ಟವನ್ನು ಅಳಿಸಿಹಾಕಿದೆ.

ADVERTISEMENT

ದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಖರೀದಿಗೆ ಹೆಚ್ಚು ಒತ್ತು ನೀಡಿದರು. ಇದರಿಂದ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು ಎಂದು ತಜ್ಞರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಆರೋಗ್ಯ ವಲಯದ ಕಂಪೆನಿಗಳು ಹೆಚ್ಚಿನ ಖರೀದಿಗೆ ಒಳಪಟ್ಟವು.

ತಾಂತ್ರಿಕ ಸಮಸ್ಯೆ: ರಾಷ್ಟ್ರೀಯ ಷೇರುಪೇಟೆಯಲ್ಲಿ ಬೆಳಿಗ್ಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಕೆಲಹೊತ್ತು ವಹಿವಾಟಿಗೆ ಅಡ್ಡಿಯಾಗಿತ್ತು. 
ಷೇರುಗಳ ಬೆಲೆ ನಿಗದಿ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದರಿಂದ ನಗದು ಮತ್ತು ವಾಯಿದಾ ವಹಿವಾಟನ್ನು ಮೂರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಸರ್ಕಾರವು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯನ್ನು (ಸೆಬಿ) ಕೇಳಿದೆ.

ಸಾಫ್ಟ್‌ವೇರ್‌ ಸಮಸ್ಯೆ: ತಾಂತ್ರಿಕ ಸಮಸ್ಯೆಯು ಸಾಫ್ಟ್‌ವೇರ್‌ಗೆ ಸಂಬಂಧಿಸಿದೆ. ಇದರಲ್ಲಿ ಸೈಬರ್‌ ದಾಳಿಯ  ಸಾಧ್ಯತೆ ಕಂಡುಬಂದಿಲ್ಲ ಎಂದು ‘ನಿಫ್ಟಿ’, ‘ಸೆಬಿ’ ಗಮನಕ್ಕೆ ತಂದಿದೆ.

ಕಂಪೆನಿಗಳ ತ್ರೈಮಾಸಿಕ ಸಾಧನೆ ಬಗ್ಗೆ ಹೂಡಿಕೆದಾರರು ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಇದು ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದ್ದು, ಉತ್ತಮ ವಹಿವಾಟಿಗೆ ಕಾರಣವಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಜರ್ಮನಿ, ಫ್ರಾನ್ಸ್‌ ಮತ್ತುಇಂಗ್ಲೆಡ್‌ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.