ADVERTISEMENT

ಬಿಎಸ್‌ಎನ್‌ಎಲ್ 6 ಸಾವಿರ ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ):  ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆ `ಬಿಎಸ್‌ಎನ್‌ಎಲ್~ 2010-11ನೇ ಸಾಲಿನಲ್ಲಿ  ರೂ6,000 ಕೋಟಿಗಳಷ್ಟು ನಷ್ಟ ದಾಖಲಿಸಿದೆ.

2009-10ನೇ ಸಾಲಿಗೆ ಹೋಲಿಸಿದರೆ ನಷ್ಟದ ಪ್ರಮಾಣ ಮೂರು ಪಟ್ಟು ಹೆಚ್ಚಿದೆ.

ನೌಕರರ ವೇತನ ಹೆಚ್ಚಳ, ಮೂರನೆಯ ತಲೆಮಾರಿನ ತರಂಗಾಂತರ (3ಜಿ) ಸೇವೆ ಮತ್ತು ಬ್ರಾಡ್‌ಬ್ಯಾಂಡ್ ನಿಸ್ತಂತು (ಬಿಡಬ್ಲ್ಯುಎ) ಸಂಪರ್ಕಕ್ಕಾಗಿ ಹೆಚ್ಚಿನ ಹಣ ಪಾವತಿಸಿದ್ದರಿಂದ ಲಾಭ ಗಣನೀಯವಾಗಿ ಕುಸಿದಿದೆ ಎಂದು ಬಿಎಸ್‌ಎನ್‌ಎಲ್ ಪ್ರಕಟಣೆ ತಿಳಿಸಿದೆ.

2009-10ನೇ ಸಾಲಿನಲ್ಲಿ ಕಂಪೆನಿ ರೂ1,823 ಕೋಟಿ ನಷ್ಟ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.