ADVERTISEMENT

ಬೆಂಗಳೂರಿನಲ್ಲಿ ಶೀಘ್ರವೇ ಐಐಪಿ ಡಿಪ್ಲೊಮಾ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಚೆನ್ನೈ(ಪಿಟಿಐ): ಬೆಂಗಳೂರಿನಲ್ಲಿ ಸದ್ಯದಲ್ಲಿಯೇ `ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್~ (ಐಐಪಿ) ಶಿಕ್ಷಣ ಸಂಸ್ಥೆ ಆರಂಭಗೊಳ್ಳಲಿದೆ.

ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನ ಸಂಸ್ಥೆಯಾದ `ಐಐಪಿ~ ವತಿಯಿಂದ ಹೊಸದಾಗಿ ಮೂರು ಶಿಕ್ಷಣ ಕೇಂದ್ರಗಳನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. 12ನೇ ಪಂಚವಾರ್ಷಿಕ ಯೋಜನೆಯಡಿ  ಕರ್ನಾಟಕ, ಅಸ್ಸಾಂ, ಗುಜರಾತ್‌ನಲ್ಲಿ ಇವು ನೆಲೆಗೊಳ್ಳಲಿವೆ ಎಂದು `ಐಐಪಿ~ ನಿರ್ದೇಶಕ-ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಎನ್.ಸಿ. ಸಹಾ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಉಳಿದೆರಡು ಐಐಪಿ ಕೇಂದ್ರ ಗುವಾಹತಿ, ಅಹಮದಾಬಾದ್‌ನಲ್ಲಿರಲಿವೆ. ಪ್ರಸ್ತುತ ಚೆನ್ನೈ, ಹೈದರಾಬಾದ್, ನವದೆಹಲಿ, ಕೋಲ್ಕತಾದಲ್ಲಿ ಐಐಪಿ ಶಿಕ್ಷಣ ಕೇಂದ್ರಗಳಿವೆ ಎಂದರು.

ಐಐಪಿ ಸದ್ಯ ಎರಡು ವರ್ಷದ ಪ್ಯಾಕೇಜಿಂಗ್ ಡಿಪ್ಲೊಮಾ ಶಿಕ್ಷಣ ನೀಡುತ್ತಿದ್ದು, ಇದು ಮುಂಬೈ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ.  ಪ್ಯಾಕೇಜಿಂಗ್ ಉದ್ಯಮಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷದ ಬಿ-ಟೆಕ್ ಆರಂಭಿಸುವ ಯೋಜನೆ ಇದ್ದು, ಪ್ರತಿವರ್ಷ 60 ಮಂದಿಗೆ ಪ್ರವೇಶ ಅವಕಾಶವಿರಲಿದೆ. ಸದ್ಯ ಕಾಲೇಜು ಮತ್ತು ಹಾಸ್ಟೆಲ್‌ಗಾಗಿ ಚೆನ್ನೈನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. 2014ರಲ್ಲಿ ಹಾಸ್ಟೆಲ್ ಆರಂಭಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.