ADVERTISEMENT

ಬೇಡಿಕೆ ಕುಸಿತ: ಚಿನ್ನದ ಧಾರಣೆ ₨285 ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಮುಂಬೈ/ನವದೆಹಲಿ(ಪಿಟಿಐ):  ಬೇಡಿಕೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಶನಿವಾರ ಸ್ವಲ್ಪ ಮಟ್ಟಿಗೆ ತಗ್ಗಿತು. ೧೦ ಗ್ರಾಂ ಚಿನ್ನ ನವದೆಹಲಿ­ಯಲ್ಲಿ ರೂ 285 ಇಳಿಕೆ ಕಂಡರೆ, ಮುಂಬೈನಲ್ಲಿ ರೂ 75 ಏರಿಕೆ ಪಡೆಯಿತು.

ನವದೆಹಲಿ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ₨30,500ರಲ್ಲೂ, ಅಪರಂಜಿ ಚಿನ್ನ ₨30,300ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ₨೪3,5೦೦ರಲ್ಲಿ ಮಾರಾಟವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.