ADVERTISEMENT

ಬ್ಯಾಂಕ್‌ಗಳ ಬಂಡವಾಳ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2016, 19:30 IST
Last Updated 9 ಆಗಸ್ಟ್ 2016, 19:30 IST
ಬ್ಯಾಂಕ್‌ಗಳ ಬಂಡವಾಳ ಸಮಸ್ಯೆ
ಬ್ಯಾಂಕ್‌ಗಳ ಬಂಡವಾಳ ಸಮಸ್ಯೆ   

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು (ಪಿಎಸ್‌ಬಿ) ಬಂಡವಾಳ ಕೊರತೆ ಎದುರಿಸುತ್ತಿವೆ. ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚಾಗಿದ್ದರಿಂದ 2015–16ರಲ್ಲಿ ಭಾರಿ ನಷ್ಟ ಅನುಭವಿಸಿವೆ.  ಸ್ವತ್ತಿನ ಗುಣಮಟ್ಟ ಉತ್ತಮವಾಗಿಲ್ಲದೇ ಇರುವುದರಿಂದ ಮಾರುಕಟ್ಟೆಯಿಂದ ಹೊಸದಾಗಿ ಬಂಡವಾಳ ಸಂಗ್ರಹಿಸುವುದು ಕಷ್ಟವಾಗಿದೆ. ವಹಿವಾಟು ವೃದ್ಧಿಗಷ್ಟೇ ಅಲ್ಲದೆ, 2019ರ ಒಳಗಾಗಿ ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡವಾದ ‘ಬಾಸೆಲ್‌–3’ ನಿಯಮ ಅಳವಡಿಕೆಗೂ ಬಂಡವಾಳದ ಅಗತ್ಯವಿದೆ.

ಬಾಸೆಲ್‌ –3 ಎಂದರೇನು
* ಬಾಸೆಲ್‌ –3 ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡವಾಗಿದೆ.
* ಆರ್ಥಿಕ ಸಂಕಷ್ಟಗಳಿಂದ ಎದುರಾಗಬಹುದಾದ ಆಘಾತವನ್ನು ಸಮರ್ಥವಾಗಿ ಎದುರಿಸಲು ಬ್ಯಾಂಕಿಂಗ್‌ ವಲಯದ ಹಣಕಾಸು ಸಾಮರ್ಥ್ಯವನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
* ಬ್ಯಾಂಕ್‌ಗಳ ಆಡಳಿತ ಮತ್ತು ನಿರ್ವಹಣಾ ವ್ಯವಸ್ಥೆಯ ಸುಧಾರಣೆ ಮತ್ತು ಪಾರದರ್ಶಕತೆ ಜಾರಿಗೊಳಿಸುವುದು ‘ಬಾಸೆಲ್‌–3’ ನಿಯಮದಲ್ಲಿ ಒಳಗೊಂಡಿದೆ.
* ದೇಶಿ ಬ್ಯಾಂಕ್‌ಗಳ ಮೇಲೆ ಆಗುವ ಪರಿಣಾಮಗಳು
* ಸರ್ಕಾರ  ಬ್ಯಾಂಕ್‌ಗಳಲ್ಲಿ ಹೊಂದಿರುವ ತನ್ನ ಪಾಲು ಬಂಡವಾಳ ತಗ್ಗಿಸಬೇಕು. ಅಂದಾಜು ಶೇ 50ರಷ್ಟು ಇಳಿಕೆ ಮಾಡುವ ಅಗತ್ಯವಿದೆ.

ಬಾಸೆಲ್‌–3ನ ಪ್ರಮುಖ 3 ಅಂಶಗಳು
* ಕನಿಷ್ಠ ಬಂಡವಾಳದ ಅಗತ್ಯ
* ಮೇಲ್ವಿಚಾರಣಾ ಪರಿಶೀಲನೆ
* ಮಾರುಕಟ್ಟೆ ಶಿಸ್ತು
ಬ್ಯಾಂಕ್‌ಗಳಿಗೆ ಆರ್ಥಿಕ ಗಂಡಾಂತರ ಎದುರಿಸುವಂತಹ ಬಂಡವಾಳ ನಿರ್ವಹಣಾ ಸಾಮರ್ಥ್ಯ ಒದಗಿಸಲು ಈ ಮೂರು ಅಂಶಗಳು ಅಗತ್ಯವಾಗಿವೆ.

ಇಂದ್ರಧನುಷ್ ಯೋಜನೆ 7 ಅಂಶಗಳೇನು
* ನೇಮಕಾತಿ ಆಡಳಿತಾತ್ಮಕ ಸುಧಾರಣೆ
* ಪಾರದರ್ಶಕತೆ
* ಬಲವರ್ಧನೆ
* ಬಂಡವಾಳ ನೆರವು
* ಒತ್ತಡನಿವಾರಣೆ
* ಬ್ಯಾಂಕ್‌ ಆಡಳಿತ ಮಂಡಳಿ (ಬಿಬಿಬಿ) ರಚನೆ

ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳ
₹3 ಲಕ್ಷ ಕೋಟಿ ಬಾಸೆಲ್‌–3ಗಾಗಿ ಅಳವಡಿಸಿಕೊಳ್ಳಲು ಬ್ಯಾಂಕ್‌ಗಳು 2019ರೊಳಗೆ  ಬೇಕಿರುವ ಬಂಡವಾಳ
₹2.5 ಲಕ್ಷ ಕೋಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳ
₹1.80 ಲಕ್ಷ ಕೋಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಂಗ್ರಹಿಸಬೇಕಿರುವುದು
₹70 ಸಾವಿರ ಕೋಟಿ ಸರ್ಕಾರಿ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರದಿಂದ ಸಿಗುವ ಒಟ್ಟು ಬಂಡವಾಳ

11 ಬ್ಯಾಂಕ್‌ಗಳಿಗೆ ಆಗಿರುವ ನಷ್ಟ
₹12 ಸಾವಿರ ಕೋಟಿ ಎಸ್‌ಬಿಐ, ಪಿಎನ್‌ಬಿ, ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಇಂಡಿಯಾ, ಸಿಂಡಿಕೇಟ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌

ಬ್ಯಾಂಕ್‌ಗಳ ರೇಟಿಂಗ್‌ ಕುಸಿತ
* ಬ್ಯಾಂಕ್‌ಗಳ ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ಜಾಗತಿಕ ಮಟ್ಟದ ಸಾಲ ಮೌಲ್ಯಮಾಪನ ಸಂಸ್ಥೆ ಫಿಚ್‌, ದೇಶಿ ಬ್ಯಾಂಕಿಂಗ್‌ ವಲಯದ ಆರ್ಥಿಕ ಮುನ್ನೋಟವನ್ನು ನಕಾರಾತ್ಮಕ ಮಟ್ಟಕ್ಕೆ ತಗ್ಗಿಸಿದೆ.

* ಎಸ್‌ಬಿಐ, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್, ಕೆನರಾ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ಗಳಿಗೆ ‘ಬಿಬಿಬಿ ಮೈನಸ್‌’ ರೇಟಿಂಗ್‌ ನೀಡಿದೆ.

* ಸಂಸ್ಥೆಯು ಈ ಮೊದಲು ಸುಸ್ಥಿರವಾದ ‘ಬಿಬಿಬಿ ಪ್ಲಸ್‌’ ರೇಟಿಂಗ್‌ ನೀಡಿತ್ತು. ಆದರೆ, ಈಗ ಎನ್‌ಪಿಎ ಹೆಚ್ಚಿರುವುದರಿಂದ  ರೇಟಿಂಗ್‌ ಅನ್ನು ‘ಬಿಬಿಬಿ ಮೈನಸ್‌’ಗೆ ಇಳಿಕೆ

* ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಆರ್ಥಿಕ ಸ್ಥಿರತೆ ವರದಿಯಲ್ಲಿ, ಬ್ಯಾಂಕ್‌ಗಳ ವಸೂಲಿಯಾಗದ ಸಾಲವು  2015ರ ಸೆಪ್ಟೆಂಬರ್‌ನಲ್ಲಿ ಶೇ 5.1ರಷ್ಟಿತ್ತು. ಅದು 2016ರ ಮಾರ್ಚ್‌ ಅಂತ್ಯಕ್ಕೆ ಶೇ7.6ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಸರ್ಕಾರದಿಂದ ₹70 ಸಾವಿರ ಕೋಟಿ ಹಂಚಿಕೆ ಹೇಗೆ
₹25 ಸಾವಿರ ಕೋಟಿ 2015–16 ನೀಡಿರುವುದು
₹25ಸಾವಿರ ಕೋಟಿ 2016–17ರಲ್ಲಿ ನೀಡಲಿರುವುದು
₹22,915 ಕೋಟಿ ನೀಡಿರುವುದು
₹10ಸಾವಿರ ಕೋಟಿ 2017–18ರಲ್ಲಿ ನೀಡುವುದು
₹10 ಸಾವಿರ ಕೋಟಿ 2018–19ರಲ್ಲಿ ನೀಡುವುದು



 

ADVERTISEMENT




 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.