ADVERTISEMENT

ಬ್ಯಾಡಗಿ ಒಣಮೆಣಸಿನಕಾಯಿ ರೂ. 350 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಬ್ಯಾಡಗಿ (ಹಾವೇರಿ ): ದೇಶದಲ್ಲಿಯೇ ಹೆಚ್ಚು ಒಣಮೆಣಸಿನಕಾಯಿ ವಹಿವಾಟು ನಡೆಸುವ ಹೆಗ್ಗಳಿಕೆಗೆ ಪಾತ್ರವಾಗಿರುವ  ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು 2012-13ನೇ ಹಣಕಾಸು ವರ್ಷದಲ್ಲಿರೂ.350 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ.

ಒಟ್ಟು ರೂ5.23 ಕೋಟಿ ಮಾರ್ಕೆಟ್ ಸೆಸ್ ಸಂಗ್ರಹಿಸುವ ಮೂಲಕ ಕಳೆದ ವರ್ಷದ (ರೂ. 5.16 ಕೋಟಿ) ದಾಖಲೆಯನ್ನು ಅಳಿಸಿ ಹಾಕಿದೆ. ಇಲಾಖೆ 2012-13ನೇ ಸಾಲಿನಲ್ಲಿ ರೂ. 6 ಕೋಟಿ ಮಾರ್ಕೆಟ್ ಸೆಸ್ ಸಂಗ್ರಹಿಸುವ ಗುರಿ ನಿಗದಿಗೊಳಿಸಿತ್ತು. ಆದರೆ ಬಿತ್ತನೆ ಸಮಯದಲ್ಲಿ ಮಳೆ ಬಾರದೆ ಆತಂಕಗೊಂಡ ಕುಂದಗೋಳ, ಸಂಶಿ, ಗುಡಗೇರಿ, ಗದಗ, ಶಿಗ್ಲಿ, ಅಣ್ಣಗೇರಿ, ಲಕ್ಷ್ಮೇಶ್ವರ ಸುತ್ತಲಿನ ರೈತರು ಹತ್ತಿ ಬೆಳೆ ಕಡೆಗೆ ಮುಖ ಮಾಡಿದ್ದರಿಂದ ಮೆಣಸಿನಕಾಯಿ ಬೆಳೆಯುವ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.

ಹೀಗಾಗಿ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ಕಡಿಮೆ ಪ್ರಮಾಣದಲ್ಲಿ ಆವಕವಾಗಿದ್ದರೂ ಬೆಲೆಯಲ್ಲಿನ ಹೆಚ್ಚಳದಿಂದ ಮಾರ್ಕೆಟ್ ಸೆಸ್ ಸಂಗ್ರಹಿಸಲು ಸಾಧ್ಯವಾಯಿತು. ಇದರಲ್ಲಿ ಶೇ 1ರಷ್ಟು ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಇನ್ನುಳಿದ ಶೇ 0.5ರಷ್ಟು ರೈತರ ಆವರ್ತ ನಿಧಿಗೆ ಸಂಗ್ರಹವಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಟಿ.ಓಬಪ್ಪ ಹಾಗೂ ಉಪ ಕಾರ್ಯದರ್ಶಿ ಪ್ರಭು ದೊಡ್ಮನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.