ADVERTISEMENT

ಬ್ರಿಟನ್‌ನಲ್ಲಿ ಹೂಡಿಕೆ: ಭಾರತೀಯ ಕಂಪೆನಿಗಳ ಮೇಲುಗೈ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಕಂಪೆನಿಗಳು ಬ್ರಿಟನ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿವೆ ಕೆ ಎಂದು ಅಮೆರಿಕದಲ್ಲಿರುವ ಬ್ರಿಟನ್ ರಾಯಭಾರಿ ಪೀಟರ್ ವೆಸ್ಟ್‌ಮಾಸ್ಕಟ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಐರ್ಲೆಂಡ್‌ನಲ್ಲಿ ನಡೆಯಲಿರುವ `ಜಿ-8' ಶೃಂಗಸಭೆ ಹಿನ್ನೆಲೆಯಲ್ಲಿ ಇಲ್ಲಿ ಸುದ್ದಿಗಾರರ ಜತೆ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಸದ್ಯ ಬ್ರಿಟನ್‌ಗೆ ಹರಿದು ಬರುತ್ತಿರುವ ವಿದೇಶಿ ನೇರ ಬಂಡವಾಳದಲ್ಲಿ (ಎಫ್‌ಡಿಐ) ಭಾರತೀಯ ಕಂಪೆನಿಗಳ ಪಾಲು ಗರಿಷ್ಠಮಟ್ಟದಲ್ಲಿದೆ. ಅಮೆರಿಕ ಮತ್ತು ಜರ್ಮನಿ ಮೂಲದ ಕಂಪೆನಿಗಳ ಪ್ರಗತಿಯನ್ನೂ ಮೀರಿ ಭಾರತೀಯ  ಕಂಪೆನಿಗಳು ಯಶಸ್ವಿಯಾಗಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದರೆ, `ಜಿ-8' ರಾಷ್ಟ್ರಗಳ ಸದಸ್ಯತ್ವ ಸಂಖ್ಯೆಯನ್ನು 9ಕ್ಕೆ ಹೆಚ್ಚಿಸಬೇಕು (ಜಿ-9) ಮತ್ತು ಇದರಲ್ಲಿ ಪ್ರಪಂಚದ ಮೂರನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತಕ್ಕೆ ಸ್ಥಾನ ನೀಡಬೇಕು ಎನ್ನುವುದರ ಕುರಿತು  ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. `ಜಿ-8' ಶೃಂಗಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿ ಮುಖ್ಯವಾಗಿ ಆರ್ಥಿಕ ಸಮಸ್ಯೆಗಳು, ರಫ್ತು ವಹಿವಾಟು, ತೆರಿಗೆ ಮತ್ತು ವ್ಯಾಪಾರ ಪಾರದರ್ಶಕತೆಯ ಕುರಿತು ಮಾತುಕತೆ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.