ADVERTISEMENT

ಮತ್ತೆ ರೇಟಿಂಗ್ ಇಳಿಕೆ ಭೀತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಮುಂಬೈ (ಪಿಟಿಐ):  `ಮುಂದಿನ ಎರಡು ವರ್ಷಗಳಲ್ಲಿ ಭಾರತದ  ರೇಟಿಂಗ್ ತಗ್ಗಿಸುವ ಸಾಧ್ಯತೆ ಮೂರರಲ್ಲಿ ಒಂದು ಭಾಗದಷ್ಟಿದೆ~ ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಸ್ಟಾಂಡರ್ಡ್ ಅಂಡ್ ಪೂರ್ಸ್‌ (ಎಸ್ ಅಂಡ್ ಪಿ) ಹೇಳಿದೆ.

`ಮುಂದಿನ 24 ತಿಂಗಳಲ್ಲಿ ಭಾರತದ ರೇಟಿಂಗ್ ಋಣಾತ್ಮಕ ಮಟ್ಟಕ್ಕೆ ತಗ್ಗಿಸುವ ಸಾಧ್ಯತೆ ಮೂರರಲ್ಲಿ ಒಂದರಷ್ಟಿದೆ~ ಎಂದು `ಎಸ್‌ಅಂಡ್‌ಪಿ~ ಹಿರಿಯ ವಿಶ್ಲೇಷಕ ತಕಹಿರ ಒಗಾವ ಬುಧವಾರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ವಾರಗಳಲ್ಲಿ ಸರ್ಕಾರ ಪ್ರಕಟಿಸಿರುವ ಕೆಲವು ಸರಣಿ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡಿವೆ ಎನ್ನುವುದು ನಿಜ. ವಿತ್ತೀಯ ಕೊರತೆ ತಗ್ಗಿಸುವ ನಿಟ್ಟಿನಲ್ಲಿ ಮತ್ತು ಹೂಡಿಕೆ ಆಕರ್ಷಿಸುವ ಹಿನ್ನೆಲೆಯಲ್ಲಿ ಇವು ಪರಿಣಾಮಕಾರಿ ಕ್ರಮಗಳೇ ಆಗಿವೆ. ಆದರೆ, `ರೇಟಿಂಗ್~ ತಗ್ಗಿಸಬೇಕಾಗಿ ಬಂದರೆ, ಅದಕ್ಕೆ ಮುಖ್ಯ ಕಾರಣ, ರಾಜಕೀಯ ಅಸ್ಥಿರತೆ ಮತ್ತು ಮಂದಗತಿಯ ಸುಧಾರಣೆ ಕ್ರಮಗಳಾಗಿರಲಿವೆ ಎಂದಿದೆ.

2014ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಇನ್ನಷ್ಟು ರಾಜಕೀಯ ಅಸ್ಥಿರತೆ ಸೃಷ್ಟಿಸುವ ಸಾಧ್ಯತೆ ಇದ್ದು, ಇದು ಕೂಡ   `ರೇಟಿಂಗ್~ ಮೇಲೆ ಪರಿಣಾಮ ಬೀರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಅಂತರವು ಶೇ 6ರಷ್ಟು ಮತ್ತು `ಜಿಡಿಪಿ~ ಶೇ 5.5ರಷ್ಟು ಇರಲಿದೆ ಎಂದು ಈ ವರದಿ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.