ADVERTISEMENT

ಮಹಿಳಾ ಉದ್ಯಮ ಸಮಾನತೆ ಭಾರತ ಹಿಂದೆ

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನವದೆಹಲಿ: ಮಹಿಳಾ ಉದ್ಯೋಗಿಗಳ ಸಮಾನತೆ ವಿಷಯದಲ್ಲಿ ಭಾರತ ಜಾಗತಿಕ ಶ್ರೇಯಾಂಕದಲ್ಲಿ 52ನೇ ಸ್ಥಾನದಲ್ಲಿದೆ.

ಕಳೆದ ವರ್ಷವೂ ಭಾರತ ಇದೇ ಸ್ಥಾನದಲ್ಲಿತ್ತು. ಮಹಿಳಾ ಉದ್ಯಮಶೀಲತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ನ್ಯೂಜಿಲೆಂಡ್‌ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ಇದೆ.

ಸಾಂಸ್ಕೃತಿಕ ಪಕ್ಷಪಾತ ಧೋರಣೆ, ಅಗತ್ಯ ಪ್ರಮಾಣದಲ್ಲಿ ಹಣಕಾಸು ಸೇವೆಗಳು ಲಭ್ಯವಾಗದಿರುವುದು ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹತೆಯು ಮಹಿಳೆಯರು ಉದ್ದಿಮೆ ವಲಯದಲ್ಲಿ ಮುಂದುವರೆಯಲು ಅಡ್ಡಿಯಾಗಿರುವ ಕಾರಣಗಳಾಗಿವೆ.

ADVERTISEMENT

ಅಮೆರಿಕ ಮತ್ತು ಚೀನಾ ನಂತರದ ಸ್ಥಾನದಲ್ಲಿ ಇರುವ ಭಾರತವು, ಇರಾನ್‌, ಸೌದಿ ಅರೇಬಿಯಾ, ಈಜಿಪ್ಟ್‌ ಮತ್ತು ಬಾಂಗ್ಲಾದೇಶ ನಂತರದ ಸ್ಥಾನದಲ್ಲಿ ಇರುವುದು ಮಹಿಳಾ ಉದ್ಯಮಿಗಳ ಮಾಸ್ಟರ್‌ಕಾರ್ಡ್‌ ಸೂಚ್ಯಂಕದಲ್ಲಿ ದಾಖಲಾಗಿದೆ.

ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಪೂರಕವಾದ ವಾತಾವರಣ ಇಲ್ಲ. ಸಾಂಸ್ಕೃತಿಕ ಪಕ್ಷಪಾತ ಧೋರಣೆಯ ಕಾರಣಕ್ಕೆ ಮಹಿಳೆಯರು ಉದ್ದಿಮೆ ವಹಿವಾಟು ಆರಂಭಿಸಲು ಹಿಂದೇಟು ಹಾಕುತ್ತಾರೆ. ಹಣಕಾಸು ಅಲಭ್ಯತೆ ಮತ್ತು ಕಡಿಮೆ ಲಾಭದಾಯಕತೆ ಕಾರಣಕ್ಕೆ ಅವರು ಉದ್ದಿಮೆ ವಿಸ್ತರಿಸಲೂ ಉತ್ಸುಕತೆ ತೋರಿಸುವುದಿಲ್ಲ.

ಲಿಂಗ ತಾರತಮ್ಯ ಕುರಿತ ಮನೋಭಾವದಿಂದಾಗಿಯೇ ಬಹುತೇಕ ಅಡಚಣೆಗಳು ಎದುರಾಗುತ್ತವೆ. ಇದರಿಂದಾಗಿ ಮಹಿಳೆಯರನ್ನು ಉದ್ಯಮಿ ಎಂದು ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಸ್ವೀಕರಿಸಲು ಹಿಂದೇಟು ಹಾಕಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.