ADVERTISEMENT

ಮಾರುತಿಯ ಹೊಸ ‘ಎಸ್‌–ಕ್ರಾಸ್‌’

ಪಿಟಿಐ
Published 2 ಅಕ್ಟೋಬರ್ 2017, 19:27 IST
Last Updated 2 ಅಕ್ಟೋಬರ್ 2017, 19:27 IST
ಕ್ರಾಸ್‌ಓವರ್‌ ಎಸ್‌–ಕ್ರಾಸ್‌
ಕ್ರಾಸ್‌ಓವರ್‌ ಎಸ್‌–ಕ್ರಾಸ್‌   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ತನ್ನ ಕ್ರಾಸ್‌ಓವರ್‌ ‘ಎಸ್‌–ಕ್ರಾಸ್‌’ನ ನವೀಕೃತ ಮಾದರಿಯನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

ನಾಲ್ಕು ಮಾದರಿಯಲ್ಲಿ ಲಭ್ಯ  ಹೊಸ ‘ಎಸ್‌– ಕ್ರಾಸ್‌’ನ  ಬೆಲೆ (ದೆಹಲಿ ಎಕ್ಸ್‌ಷೋರೂಂ) ₹ 8.49 ಲಕ್ಷದಿಂದ ₹ 11.29 ಲಕ್ಷದವರೆಗೆ ಇದೆ.

‘ಹೊಸ ಸ್ವರೂಪದಲ್ಲಿ ಇರುವ ‘ಎಸ್‌–ಕ್ರಾಸ್‌’ ನಮ್ಮ ಬದಲಾವಣೆಯ ಪಯಣದಲ್ಲಿ ಹೊಸ ಮೈಲುಗಲ್ಲು ಆಗಿದೆ. ಇದು. ನಗರ ಪ್ರದೇಶದ ವಿಲಾಸಿ ವಾಹನಗಳ ವಿಭಾಗದಲ್ಲಿ ಸಂಸ್ಥೆಯ ಮಾರುಕಟ್ಟೆ ಪಾಲನ್ನು ಇದು ಗಮನಾರ್ಹವಾಗಿ ಹೆಚ್ಚಿಸಲಿದೆ’ ಎಂದು ‘ಎಂಎಸ್‌ಐ’ನ ವ್ಯವಸ್ಥಾಪಕ ನಿರ್ದೇಶಕ  ಕೆನಿಚಿ ಅಯುಕವಾ  ಹೇಳಿದ್ದಾರೆ.

ADVERTISEMENT

ಪರಿಸರ ಸ್ನೇಹಿ ತಂತ್ರಜ್ಞಾನ (ಡಿಡಿಐಎಸ್‌200) ಒಳಗೊಂಡಿರುವ ‘ಎಸ್‌–ಕ್ರಾಸ್‌’ನಿಂದ ಪರಿಸರ ಮಾಲಿನ್ಯವು ಗಮನಾರ್ಹವಾಗಿ ಕಡಿಮೆಯಾಗಲಿದೆ.

ಹೊಸ ‘ಎಸ್‌–ಕ್ರಾಸ್‌’ ಅಭಿವೃದ್ಧಿಪಡಿಸಲು ‘ಎಂಎಸ್‌ಐ’ ಮತ್ತು ಅದರ ಬಿಡಿಭಾಗ ಪೂರೈಕೆದಾರರು ₹ 100 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.