ADVERTISEMENT

ಮಾರುತಿ ಕಾರು: ಬೆಲೆ ಏರಿಕೆ ಸಾಧ್ಯತೆ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 10:17 IST
Last Updated 6 ಡಿಸೆಂಬರ್ 2012, 10:17 IST

ನವದೆಹಲಿ (ಪಿಟಿಐ): ದೇಶದ ಪ್ರಮುಖ ಹಾಗೂ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ `ಮಾರುತಿ ಸುಜುಕಿ ಇಂಡಿಯಾ' ತನ್ನ ಉತ್ಪನ್ನದ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಜನವರಿ ತಿಂಗಳಿನಿಂದ ಸುಮಾರು 20ಸಾವಿರ ರೂ.ಗಳವರೆಗೆ ಏರಿಸುವ ಸೂಚನೆಯನ್ನು ಹೊರಹಾಕಿದೆ.

ಕ್ವಾಂಟಮ್ ಮಾದರಿ ಕಾರಿನ ಬೆಲೆಯನ್ನು ರೂ. 20ಸಾವಿರಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಮಾರ್ಕೆಟಿಂಗ್ ಮತ್ತು ಮಾರಾಟ) ಮಯಾಂಕ್ ಪರೀಕ್ ತಿಳಿಸಿದ್ದಾರೆ.

ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿಯುತ್ತಿರುವುದರಿಂದ ಹಾಗೂ ಕಾರಿನ ಬಿಡಿಭಾಗಗಳು ಸೇರಿದ್ದಂತೆ ಕಚ್ಚಾ ಸಾಮಗ್ರಿಗಳ ಬೆಲೆಗಳು ಹೆಚ್ಚಿರುವುದರಿಂದಾಗಿ ಕಾರುಗಳ ಬೆಲೆ ಏರಿಕೆಯು ಅನಿವಾರ್ಯ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.