ADVERTISEMENT

ಮಾರುತಿ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ, ದೇಶೀಯ ಮಾರುಕಟ್ಟೆಯಲ್ಲಿ `ಒಂದು ಕೋಟಿ ಕಾರುಗಳ~ ಮಾರಾಟದ ಮೈಲಿಗಲ್ಲು ದಾಟಿರುವುದಾಗಿ ಹೇಳಿದೆ.

ಕಂಪೆನಿಯು ಕಳೆದ 29 ವರ್ಷಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಶುಕ್ರವಾರ ಬೆಳಿಗ್ಗೆ ಮಾನೇಸರ ತಯಾರಿಕೆ ಘಟಕದಲ್ಲಿ ತಯಾರಿಸಿದ `ಸ್ವಿಫ್ಟ್-ವಿಎಕ್ಸ್‌ಐ~ ಕಾರು ಕೊಯಮತ್ತೂರಿನಲ್ಲಿರುವ ಗ್ರಾಹಕರೊಬ್ಬರಿಗೆ ಮಾರಾಟಮಾಡಲಾಯಿತು. ಈ ಮೂಲಕ ಈ ಮೈಲಿಗಲ್ಲು ತಲುಪಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.