ADVERTISEMENT

ಮುಂದಿನ ವರ್ಷ ಇನ್ಫೊಸಿಸ್‌ನಿಂದ 16 ಸಾವಿರ ಎಂಜಿನಿಯರ್‌ಗಳ ನೇಮಕ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಮುಂಬೈ (ಪಿಟಿಐ): ಇನ್ಫೊಸಿಸ್‌ ಮುಂದಿನ ವರ್ಷ 16 ಸಾವಿರ ಎಂಜಿನಿ­ಯರ್‌ಗಳನ್ನು ನೇಮಕ ಮಾಡಿಕೊ­ಳ್ಳಲಿದೆ ಎಂದು ಕಂಪೆನಿ ಅಧ್ಯಕ್ಷ ಎನ್‌.­ಆರ್‌. ನಾರಾಯಣ ಮೂರ್ತಿ ಬುಧ­ವಾರ ಇಲ್ಲಿ ಹೇಳಿದರು.

‘ಅಮೆರಿಕ ಮತ್ತು ಯೂರೋಪ್‌ ಮಾರು­ಕಟ್ಟೆಗಳಿಂದ ಹೊರಗುತ್ತಿಗೆ ಸೇವೆಗಳಿಗೆ (ಬಿಪಿಒ) ಬೇಡಿಕೆ ಹೆಚ್ಚಿದೆ.  ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ನೇಮಕಾತಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

‘ಭಾರತ ಜೊಳ್ಳು ಮಾತಿನ ದೇಶ. ಇಲ್ಲಿ ಮಾತನಾಡುವವರೇ ಹೆಚ್ಚು. ಆಡಿದ ಮಾತನ್ನು ಕಾರ್ಯ­ಗತಗೊಳಿ­ಸುವವರ ಸಂಖ್ಯೆ ಕಡಿಮೆ. ಕೇವಲ ‘ಮೇರಾ ಭಾರತ್‌ ಮಹಾನ್‌‘ ಮಂತ್ರ ಜಪಿಸುವು­ದರಿಂದ ಯಾವುದೇ ಪ್ರಯೋ­ಜನವಿಲ್ಲ. ಹೊಸ, ಹೊಸ ಕನಸುಗಳನ್ನು ಕಂಡು, ಗುರಿ ಮುಟ್ಟಲು ಪ್ರಾಮಾ­ಣಿಕವಾಗಿ ಪ್ರಯತ್ನಿಸಬೇಕು. ಕೇವಲ ಸಿನಿಕರಾಗಿ ಉಳಿಯಬಾರದು’ ಎಂದು ಅವರು ಇಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.