ADVERTISEMENT

ಮೊಟ್ಟೆ ಧಾರಣೆ ಕುಸಿತ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ನವದೆಹಲಿ(ಪಿಟಿಐ): ಬೇಸಿಗೆ ಕಾಲದಲ್ಲಿ ಕಡಿಮೆಯಾದ ಬೇಡಿಕೆ ಮತ್ತು ಅರಬ್ ರಾಷ್ಟ್ರಗಳು ಭಾರತದಿಂದ ಕೋಳಿಮೊಟ್ಟೆ ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ಹೇರಿರುವ ಪರಿಣಾಮ, ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಧಾರಣೆ ಶೇ. 30ರಷ್ಟು ಕುಸಿದಿದೆ.

ಚಳಿಗಾಲದಲ್ಲಿ ರೂ. 4ರಷ್ಟಿದ್ದ ಕೋಳಿಮೊಟ್ಟೆ ಧಾರಣೆ, ಈಗ ಬೇಸಿಗೆಯಲ್ಲಿ ರೂ. 2.75ಕ್ಕೆ ಕುಸಿದಿದೆ ಎಂದು ಕುಕ್ಕಟೋದ್ಯಮ ಸಂಘಟನೆ `ಎನ್‌ಇಸಿಸಿ~ ಸೋಮವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.