ADVERTISEMENT

ಮೊಬೈಲ್‌ ಇಂಟರ್‌ನೆಟ್‌ ಬಳಕೆ ಹೆಚ್ಚಳ

ಏಜೆನ್ಸೀಸ್
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ನವದೆಹಲಿ: ದೇಶದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 2018ರ ಜೂನ್‌ ವೇಳೆಗೆ 47 ಕೋಟಿಗೆ ತಲುಪುವ ಅಂದಾಜು ಮಾಡಲಾಗಿದೆ.

ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿದ್ದು, ಅತ್ಯಂತ ವೇಗವಾಗಿ ಮತ್ತು ಕಡಿಮೆ ಬೆಲೆಗೆ ಮೊಬೈಲ್‌ ಸೇವೆಗಳು ಲಭ್ಯವಾಗುತ್ತಿವೆ. ಹೀಗಾಗಿ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ ಎಂದು ಇಂಟರ್‌ನೆಟ್‌ ಆ್ಯಂಡ್ ಮೊಬೈಲ್‌ ಅಸೋಸಿಯೇಷನ್‌ ಆಫ್ ಇಂಡಿಯಾದ (ಐಎಎಂಎಐ) ಜಂಟಿ ವರದಿ ತಿಳಿಸಿದೆ.

ನಗರ ಪ್ರದೇಶಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ 18.64ರಷ್ಟು ಪ್ರಗತಿ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಶೇ 15.03 ರಷ್ಟಿದೆ ಎಂದು ಹೇಳಿದೆ.

ADVERTISEMENT

ಆರೋಗ್ಯ ವಲಯದ ವರಮಾನ ವೃದ್ಧಿ ‘ಇಕ್ರಾ’ ನಿರೀಕ್ಷೆ
ಮುಂಬೈ: ಐದು ವರ್ಷಗಳಲ್ಲಿ ಆರೋಗ್ಯ ವಲಯದ ವರಮಾನ ಶೇ 14 ರಷ್ಟು ವೃದ್ಧಿ ಕಾಣಲಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ (ಇಕ್ರಾ) ಹೇಳಿದೆ.

ಆರೋಗ್ಯ ವಲಯದಲ್ಲಿ ನಿಯಂತ್ರಣಾ ವ್ಯವಸ್ಥೆಯ ಸವಾಲುಗಳಿದ್ದರೂ ದೀರ್ಘಾವಧಿಗೆ ಪ್ರಗತಿ ಮಟ್ಟ ಸ್ಥಿರವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಜೀವನದ ನಿರೀಕ್ಷೆಗಳು, ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗುತ್ತಿರುವುದು ಹಾಗೂ ಆರೋಗ್ಯ ವಿಮೆ ಯೋಜನೆಗೆ ಒಳಪಡುತ್ತಿರುವವರ ಹೆಚ್ಚಳದಿಂದಾಗಿ ಆಸ್ಪತ್ರೆಗಳಿಗೆ ಇರುವ ಬೇಡಿಕೆ ನಿರಂತರವಾಗಿರಲಿದೆ ಎಂದಿದೆ.

ಹಲವು ರೀತಿಯ ನಿಯಂತ್ರಣಾ ವ್ಯವಸ್ಥೆ, ವೈದ್ಯಕೀಯ ಸಾಧನಗಳ ಬೆಲೆ ಏರಿಕೆ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಆರೋಗ್ಯದ ವಲಯದ ಪ್ರಗತಿಗೆ ಅಲ್ಪ ಹಿನ್ನಡೆ ಆಗಿತ್ತು ಎಂದೂ ‘ಇಕ್ರಾ’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.