ADVERTISEMENT

ಮೊಬೈಲ್ ಟವರ್; ರೂ. 700ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಘಾಜಿಯಾಬಾದ್(ಪಿಟಿಐ): ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದೂ ಸೇರಿದಂತೆ ಕೆಲವು ಪ್ರಕ್ರಿಯಾತ್ಮಕ ಕ್ರಮಗಳನ್ನು ಕೈಗೊಳ್ಳದ ಮೊಬೈಲ್ ಟವರ್ ಕಂಪೆನಿಗಳಿಗೆ ಒಟ್ಟು ರೂ.700 ಕೋಟಿ ದಂಡ ವಿಧಿಸಲಾಗಿದೆ.

ಬಹಳಷ್ಟು ಮೊಬೈಲ್ ಟವರ್‌ಗಳಿಂದ ಹೊರಸೂಸುವ ವಿಕಿರಣ ಪ್ರಮಾಣ ನಿಗದಿತ ಮಿತಿಯೊಳಗೇ ಇದೆ. ಒಟ್ಟು ದಂಡ ಮೊತ್ತದಲ್ಲಿ ಶೇ 1ರಷ್ಟನ್ನು ಮಾತ್ರ ವಿಕಿರಣ ಮಿತಿ ದಾಟಿದ ಲೋಪಕ್ಕಾಗಿ ವಿಧಿಸಿದ್ದಾಗಿದೆ. ಶೇ 99ರಷ್ಟು ದಂಡ ಪ್ರಕ್ರಿಯಾತ್ಮಕ ಕಾರಣಕ್ಕಾಗಿದೆ ಎಂದು `ಭಾರತೀಯ ಮೊಬೈಲ್ ಸಂಪರ್ಕ ಸೇವಾ ಕಂಪೆನಿಗಳ ಸಂಘಟನೆ'(ಸಿಒಎಐ) ಸಹ ನಿರ್ದೇಶಕ ವಿಕ್ರಂ ತಿವಾಥಿಯಾ ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ರೂ.5 ಲಕ್ಷ ದಂಡ
ಸರ್ಕಾರಿ ನಿಯಮ ಪ್ರಕಾರ ನಿಯಮ ಉಲ್ಲಂಘಿಸುವ ಮೊಬೈಲ್ ಟವರ್‌ಗೆ ರೂ.5 ಲಕ್ಷ ದಂಡ ವಿಧಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.