ADVERTISEMENT

ಯುಬಿ ಕಂಪೆನಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಬೆಂಗಳೂರು: ಯುನೈಟೆಡ್‌ ಬ್ರೀವರಿಸ್‌ ಕಂಪೆನಿ­ಯನ್ನು ಮುಚ್ಚಿಯಾದರೂ ತನ್ನ ಸಾಲ ತೀರಿಸಬೇಕು ಎಂದು ಕೋರಿ ಫ್ರಾನ್ಸ್‌ ಮೂಲದ ಬಿಎನ್‌ಪಿ ಪಾರಿಬಾಸ್‌ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಯುನೈಟೆಡ್‌ ಬ್ರೀವರಿಸ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಬಿಎನ್‌ಪಿ ಪಾರಿಬಾಸ್‌ ಕಂಪೆನಿಗೆ ಯುನೈಟೆಡ್‌ ಬ್ರೀವರಿಸ್‌ ಕಂಪೆನಿಯು ₨ 200 ಕೋಟಿ ನೀಡಬೇಕು. ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪೆನಿಗೆ ವಿಮಾನ ಖರೀದಿಸಲು ಬಿಎನ್‌ಪಿ ಪಾರಿಬಾಸ್‌­ನಿಂದ ಹಣ ಪಡೆಯುವಾಗ, ಈ ಮೊತ್ತಕ್ಕೆ ಯುನೈಟೆಡ್‌ ಬ್ರೀವರಿಸ್‌ ಕಾರ್ಪೊರೇಟ್‌ ಖಾತ್ರಿ ನೀಡಿತ್ತು.

ಯುಬಿ ಕಂಪೆನಿಯನ್ನು ಮಾರಿ­ಯಾದರೂ ತನಗೆ ಆ ಮೊತ್ತ ಪಾವತಿಸಬೇಕು ಎಂದು ಬಿಎನ್‌ಪಿ ಸಲ್ಲಿಸಿದ ಅರ್ಜಿಯನ್ನು ಏಕಸದಸ್ಯ ಪೀಠ ನವೆಂಬರ್‌ 19ರಂದು ವಿಚಾರಣೆಗೆ ಅಂಗೀಕರಿಸಿತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎನ್‌. ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.