ADVERTISEMENT

ರಫ್ತು: ಅಲ್ಪ ಪ್ರಗತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 19:30 IST
Last Updated 8 ನವೆಂಬರ್ 2011, 19:30 IST
ರಫ್ತು: ಅಲ್ಪ ಪ್ರಗತಿ
ರಫ್ತು: ಅಲ್ಪ ಪ್ರಗತಿ   

ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ ತಿಂಗಳಲ್ಲಿ ದೇಶದ ಒಟ್ಟು ರಫ್ತು ವಹಿವಾಟು ಶೇ 10ರಷ್ಟು ಪ್ರಗತಿ ದಾಖಲಿಸಿದ್ದು, 19 ಶತಕೋಟಿ ಡಾಲರ್ ( ್ಙ95,000 ಕೋಟಿ) ವಹಿವಾಟು ದಾಖಲಿಸಿದೆ.

ಈ ಅವಧಿಯಲ್ಲಿ ಆಮದು ಪ್ರಮಾಣ ಶೇ 21ರಷ್ಟು ಹೆಚ್ಚಿದ್ದು, 39 ಶತಕೋಟಿ ಡಾಲರ್‌ಗಳಿಗೆ (್ಙ1,95,000 ಕೋಟಿ) ಏರಿಕೆಯಾಗಿದೆ. ಇದರಿಂದ ವ್ಯಾಪಾರ ಕೊರತೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದ್ದು, 19 ಶತಕೋಟಿ ಡಾಲರ್(್ಙ95,000ಕೋಟಿ) ಗಳಷ್ಟಾಗಿದೆ. ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ವ್ಯಾಪಾರ ಕೊರತೆ ಅಂತರ ಹೆಚ್ಚಿರುವುದು ಕಳವಳಕಾರಿ ಬೆಳವಣಿಗೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ದೇಶದ ಒಟ್ಟು ರಫ್ತು ವಹಿವಾಟು 179 ಶತಕೋಟಿ ಡಾಲರ್ ( ್ಙ8,95,000 ಕೋಟಿ) ಗಳಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 46ರಷ್ಟು ಪ್ರಗತಿ ದಾಖಲಿಸಿದೆ.
 
ಕಳೆದ ಏಳು ತಿಂಗಳ ಅವಧಿಯಲ್ಲಿ ಆಮದು ವಹಿವಾಟು  ಕೂಡ ಶೇ 31ರಷ್ಟು ಪ್ರಗತಿ ಕಂಡಿದ್ದು, 273 ಶತಕೋಟಿ ಡಾಲರ್ ( ್ಙ13,65,000 ಕೋಟಿ)ಗಳಷ್ಟಾಗಿದೆ.  ಈ ಅವಧಿಯಲ್ಲಿ  ವ್ಯಾಪಾರ ಕೊರತೆಯು 93 ಶತಕೋಟಿ ಡಾಲರ್ (್ಙ4,65,000 ಕೋಟಿ) ಗಳಿಗೆ ಏರಿಕೆಯಾಗಿದೆ.

ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಸಾಲದ ಬಿಕ್ಕಟ್ಟು ದೇಶದ ರಫ್ತು ವಹಿವಾಟಿನ ಮೇಲೆ ತೀವ್ರ ಪರಿಣಾಮ  ಬೀರಿದೆ ಎಂದು ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.